ಬಸ್ಸಿಗಾಗಿ ವಡ್ಡು ನಾಗಲಾಪುರ ವಿದ್ಯಾರ್ಥಿಗಳಿಂದ ಧೀಡೀರ್ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಸಂಡೂರು :ಮಾ: 17: ಪರೀಕ್ಷೆ ಸಮಯದಲ್ಲಿ ಯಾವ ಬಸ್ಸುಗಳು ಸಹ ಬರದೇ, ಬಂದ ಬಸ್ಸುಗಳು ನಿಲ್ಲಿಸದೇ ಇರುವುದರಿಂದ ಸಿಟ್ಟಿಗೆದ್ದ ವಡ್ಡು, ನಾಗಲಾಪುರ ಗ್ರಾಮದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಯ ಮೂಲಕ ಬಸ್ ಸಂಚಾರವನ್ನು ತಡೆ ಹಿಡಿದ ಘಟನೆ ವಡ್ಡು ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತಕ್ಷಣ ಮಾಹಿತಿ ತಿಳಿದ ಪೋಲಿಸ್ ಸಿಬ್ಬಂದಿ, ಗ್ರಾಮಸ್ಥರು ಅಗಮಿಸಿದರು, ವಿದ್ಯಾರ್ಥಿಗಳಿಗೆ ಈಗಾಗಲೇ 9ನೆ ತರಗತಿ, ಪದವಿ, ಪಿ.ಯು.ಸಿ. 10ನೇ ತರಗತಿ ಸಿ.ಬಿ.ಎಸ್ಸಿ. ಪರೀಕ್ಷೆಗಳು ಪ್ರಾರಂಭವಾಗಿದ್ದು ಬೆಳಿಗ್ಗೆ 7 ಗಂಟೆಯಿಂದಲೇ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಲಾಂಗ್ ರೂಟ್ ಬಸ್ಸುಗಳು ನಿಲ್ಲಿಸದೇ ಹೋಗಿದ್ದು, ನಿತ್ಯ ಬರುವ ಬಸ್ಸುಗಳು ಸರಿಯಾಗಿ ಬರದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿ ತಕ್ಷಣ ಮುಷ್ಕರ ಪ್ರಾರಂಭಿಸಿದರು, ತಕ್ಷಣ ಪೋಲಿಸರು ಮಧ್ಯ ಪ್ರವೇಶ ಮಾಡಿ ಬಸ್ಸುಗಳ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೋಗುವಂತೆ ಮಾಡಿದರು.