ಬಸ್‌ಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ : ಪ್ರಯಾಣಿಕರಿಗೆ ಗಾಯ

ಸಿಂಧನೂರು.ಜು.೧೪-ಅಕ್ರಮ ಮರಳು ಸಾಗಾಣಿಕೆಯ ತೊಡಗಿದ ಟ್ರ್ಯಾಕ್ಟರ್ ಎನ್‌ಕೆಎಸ್‌ಆರ್ ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿದ್ದು ಹಾಗೂ ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು ಗಾಯಗೊಂಡ ಪ್ರಯಾಣಿಕರು ಹಾಗೂ ಟ್ರ್ಯಾಕ್ಟರ್ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ದಾಖಲು ಮಾಡಲಾಗಿದೆ.
ದೇವದುರ್ಗ ಡಿಪೋದಿಂದ ಬೆಂಗಳೂರುಗೆ ಹೊರಟಿದ್ದ ಬಸ್ ನಂ.ಕೆ.ಎ ೩೬ ಎಫ್ ೧೫೨೧ ಈ ಬಸ್ಸಿಗೆ ತಾಲೂಕಿನ ಕೆಂಗಲ್ ಕ್ರಾಸ್ ಹತ್ತಿರ ಅಕ್ರಮ ಮರಳು ತುಂಬಿದ ಟ್ರಾಕ್ಟರ್ ನಿನ್ನೆ ಮಧ್ಯಾಹ್ನ ೧೨:೩೦ಕ್ಕೆ ಡಿಕ್ಕಿ ಹೊಡೆದಿದ್ದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರಿಗೆ ಹಲ್ಲುಮುರಿದಿದ್ದು ಸಣ್ಣ ಪುಟ್ಟ ಗಾಯಗಳಾಗಿದ್ದು ಟ್ರಾಕ್ಟರ್ ಚಾಲಕನ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸೋರುತ್ತಿತ್ತು.ಗಾಯಗೊಂಡ ಪ್ರಯಾಣಿಕರನ್ನು ಹಾಗೂ ಚಾಲಕನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿಗೆ ದಾಖಲು ಮಾಡಲಾಗಿದೆ.ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ.
ದೇವದುರ್ಗ ದಲ್ಲಿ ಬೆಂಗಳೂರುಗೆ ಹೊರತ್ತಿದ್ದ ಬಸ್ ತಾಲೂಕಿನ ಡದೇಸೂಗುರಿನ ಹತ್ತಿರ ಕೆಂಗಲ್ ಕ್ರಾಸ್ ಬಳಿ ಕೆಂಗಲ್ ಗ್ರಾಮದಿಂದ ಅಕ್ರಮ ಮರಳು ತುಂಬಿಕೊಂಡು ಬಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ನ ಮುಂದಿನ ಗಾಲಿಗಳು ಮುರಿದುಬಿದ್ದು ಚಾಲಕ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ತೀವ್ರ ರಕ್ತ ಸ್ರಾವವಾಗಿದೆ.
ಬಸ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಗಂಟೆಗಳ ಕಾಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಬಂದಾಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರಿಗೆ ತೊಂದರೆ ಯಾಗಿದ್ದು ಕಂಡು ಬಂತು. ಸ್ಥಳಕ್ಕೆ ಸಿಂಧನೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಎನ್‌ಕೆಎಸ್‌ಆರ್‌ಟಿಸಿ ಬಸ್ಸಿಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರಿಗೆ ಹಲ್ಲುಗಳು ಮುರಿದಿದ್ದು,ಇನ್ನು ಕೆಲವರಿಗೆ ತಲೆ ಹೊಡೆದಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಯಾಣಿಕರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಸ್ ಚಾಲಕ ಪರುಶುರಾಮ,ನಿರ್ವಾಹಕ ಶರಣಪ್ಪ ಪತ್ರಿಕೆಗೆ ತಿಳಿಸಿದರು.
ಬಸ್ಸಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಸುದ್ದಿ ಕೇಳಿ ಸಿಂಧನೂರು ಎನ್‌ಕೆಎಸ್‌ಆರ್‌ಟಿಸಿ ಅಧಿಕಾರಿ ಈರಣ್ಣ ಅಪಘಾತ ನಡೆದ ಸ್ಥಳಕ್ಕೆ ಬಂದು ಪರಿಶೀಲಿಸಿ ಬಸ್ಸಿನ ಮುಂದಿನ ಭಾಗ ಜಖಂಗೊಂಡು ಸಂಸ್ಥೆಗೆ ನಷ್ಟವಾಗಿದ್ದು ಸಂಸ್ಥೆ ಹಿತದೃಷ್ಟಿಯಿಂದ ಗ್ರಾಮೀಣ ಪೊಲೀಸ್ ಠಾಣೆಗೆ ಟ್ರಾಕ್ಟರ್ ಚಾಲಕ ಹಾಗೂ
ಮಾಲೀಕನ ವಿರುದ್ಧ ದೂರು ನೀಡಬೇಕಾಗಿತ್ತು. ಆದರೆ ಅಪಘಾತ ನಡೆದು ೨೪ ಗಂಟೆ ನಡೆದರೂ ಸಹ ಸಾರಿಗೆ ಅಧಿಕಾರಿಗಳು ದೂರು ನೀಡದೆ ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮ ಮರಳು ಮಾಲೀಕರೊಂದಿಗೆ ಶಾಮೀಲಾಗಿ ಲಂಚ ಪಡೆದು ಕೇಸ್ ಮುಚ್ಚಿ ಹಾಕಿ ಸಂಸ್ಥೆಗೆ ದ್ರೋಹ ಮಾಡುತ್ತಿದ್ದು ಸಾರಿಗೆ ಜಿಲ್ಲಾಧಿಕಾರಿ ಗಳು ಇದರ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಿ ಕೇಸ್ ಮುಚ್ಚಿ ಹಾಕಲು ಯತ್ನಿಸಿದ ಅಧಿಕಾರಿ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ.
ಅಪಘಾತ ಕುರಿತು ಪ್ರಕರಣ ದಾಖಲಾದ ಬಗ್ಗೆ ಗ್ರಾಮೀಣ ಪಿ ಎಸ್ ಐ ಅವರನ್ನು ಪತ್ರಿಕೆ ಮಾತನಾಡಿಸಿದಾಗ ಟ್ರ್ಯಾಕ್ಟರ್ , ಬಸ್ ಡಿಕ್ಕಿಯಾಗಿದ್ದು ನಿಜ ಸಾರಿಗೆ ಅಧಿಕಾರಿಗಳು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ತನಿಖೆ ನಡೆಸಲಾಗುತ್ತದೆ ಆದರೆ ಇಲ್ಲಿತನಕ ಯಾರು ದೂರು ನೀಡಿಲ್ಲ ಎಂದು ಪಿಎಸ್‌ಐ ಯರಿಯಪ್ಪ ಪತ್ರಿಕೆಗೆ ಸ್ಪಷ್ಟನೆ ನೀಡಿದರು.