ಬಸ್‍ಗಾಗಿ ವಿದ್ಯಾರ್ಥಿಗಳ ಪರದಾಟ

ಹುಣಸಗಿ,ಸೆ.13-ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಇಸ್ಲಾಂಪೂರ್ ಹಾಗೂ ಕೋಳಿಹಾಳ್ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಮನವೀಯ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹುಣಸಗಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಲಿಂಗ ಸಾಹುಕಾರ ಪಟ್ಟಣಶೆಟ್ಟಿ, ಮಾತನಾಡಿ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ಸರಿಯಾದ ಸಮಯಕ್ಕೆ ಬಸ್ ಗಳನ್ನು ಬರುತ್ತಿಲ್ಲ, ಕೇವಲ ಕೋಳಿಹಾಳ್, ಇಸ್ಲಾಂಪೂರ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಹುಣಸಗಿ ಪಟ್ಟಣ ಹಾಗೂ ತಾಳಿಕೋಟಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್‍ಗಳಿಲ್ಲ, ಆದಷ್ಟು ಬೇಗನೆ ಈ ಸಮಸ್ಸೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.
ನಂತರ ಬಸ್ ನಿಲ್ದಾಣದ ಮೇಲ್ವಿಚಾರಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜು ಅವರಾದಿ, ನಿಂಗಣ್ಣ ಗುತ್ತೇದಾರ, ಸಂಗಯ್ಯ ಹಾಲಬಾವಿ, ನಿಂಗಣ್ಣ ಆಲಾಳ, ಶರಣು ಅಂಗಡಿ, ಸುಭಾನ್ ನಭೋಜಿ, ಬಂದೇನವಾಜ್ ಯಾತನೂರ್ ಸೇರಿದಂತೆ 30 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು.