ಬಸಾಪುರದ ಶಾಲೆಯಲ್ಲಿ ಕನಕದಾಸರ ಜನ್ಮದಿನಾಚರಣೆ


ದಾವಣಗೆರೆ.ನ.೨೨; ಮಹಾನಗರಪಾಲಿಕೆ 21 ನೇ ವಾರ್ಡಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಾರ್ಥ್ ಅಧ್ಯಕ್ಷತೆಯಲ್ಲಿ ಕನಕದಾಸರ ಜನ್ಮದಿನಾಚರಣೆ ಆಚರಿಸಲಾಯಿತು.ಶಿಕ್ಷಕಿ ಸುಮಿತ್ರ ಎನ್.ಎಲ್, ಕೆ.ಎಲ್. ಹರೀಶ್, ಶಿಕ್ಷಕ ರವಿ ಬಿ.ಸಿ ರವರು ಕನಕದಾಸರ ಕುರಿತು ಮಾತನಾಡಿದರು ನಂತರ ಕನಕದಾಸರ ಜನ್ಮ ಚರಣೆಯ ಪ್ರಯುಕ್ತ ಶಾಲಾ ಮುಂಭಾಗದ ರಸ್ತೆಯಲ್ಲಿದ್ದ ಗುಂಡಿಗಳನ್ನು ಎಸ್ಡಿಎಂಸಿ ಸದಸ್ಯರುಗಳು ಮಣ್ಣು ಹಾಕಿ ಮುಚ್ಚಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗವೇಣಿ  ಸದಸ್ಯರುಗಳಾದ ತಿಪ್ಪೇಶ್, ರಮೇಶ್, ಸುನೀತ, ಶಕುಂತಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್, ಗ್ರಾಮದ ಹನುಮಂತಪ್ಪ,ಕರಿಬಸಪ್ಪ, ಗಣೇಶ್ ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಕ್ಷರ ದಾಸೋಹ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಣೆ ಮಾಡಿದರು ಸೌಮ್ಯ ಕೆ.ಎಂ ವಂದನಾರ್ಪಣೆ ಮಾಡಿದರು.