ಬಸಾಪುರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

ದಾವಣಗೆರೆ.ಸೆ.೨೦; ೨೧ನೆಯ ವಾರ್ಡ್ ಬಸಾಪುರ ಗ್ರಾಮದಲ್ಲಿ ಮಹಾನಗರ ಪಾಲಿಕೆಯ ೧೪ನೇ ಹಣಕಾಸು ಯೋಜನೆಯಲ್ಲಿ ೧೨ ಲಕ್ಷ ರೂ ಮೊತ್ತದ ಅಂಗನವಾಡಿ ಕಟ್ಟಡಕ್ಕೆ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕರು ಬಸಾಪುರಕೆ ಸಾಕಷ್ಟು ಅನುದಾನಗಳನ್ನು ಒದಗಿಸಿದ್ದು, ಮುಂದಿನ ದಿನಗಳಲ್ಲಿ ಸಹ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ಮಾಡುವ ಭರವಸೆ ನೀಡಿದರು.ಕೊರೋನ ದಂತಹ ಸಂದರ್ಭದಲ್ಲೂ ಸಹ ತಮ್ಮ ಗ್ರಾಮಕ್ಕೆ ಬಂದು ಕಾರ್ಯಕ್ರಮ ನಡೆಸಿಕೊಟ್ಟ ಶಾಸಕರಿಗೆ ಗ್ರಾಮದ ಮುಖಂಡ ಎಸ್. ಸುರೇಂದ್ರಪ್ಪ ಧನ್ಯವಾದ ಅರ್ಪಿಸಿದರು ಹಾಗೂ ತಮ್ಮ ಗ್ರಾಮಕ್ಕೆ ಬೇಕಾದ ಕಾಮಗಾರಿಗಳು ಹಾಗೂ ಬಡವರಿಗೆ ನಿವೇಶನಗಳನ್ನು ನೀಡಬೇಕಾಗಿ ಮನವಿ ಸಲ್ಲಿಸಿದರು.ಎಂ.ಎಸ್. ಕೊಟ್ರಯ್ಯ ಮಾತನಾಡಿ ಹಿಂದೆ ನಮ್ಮ ಗ್ರಾಮಕ್ಕೆ ಶಾಸಕರು ಅತಿ ಹೆಚ್ಚಿನ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲೂ ಸಹ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಬೇಕಾಗಿ ಕೇಳಿಕೊಂಡರು. ಗ್ರಾಮಸ್ಥರ ಪರವಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ ಶಾಸಕರಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವಲೀಲಾ ಕೊಟ್ರಯ್ಯ ಮಾಜಿ ಉಪ ಮೇಯರ್ ಗೌಡ್ರ ರಾಜಶೇಖರ ಗ್ರಾಮದ ಮುಖಂಡರುಗಳಾದ ಸಿ. ಮಹೇಶ್ವರಪ್ಪ, ಕೆ.ಬಿ. ಲಿಂಗರಾಜ್ ಕರಿಬಸಯ್ಯ, ನಾಗೇಂದ್ರ ಚಾರ್, ಕೆಂಪನಹಳ್ಳಿ ಲಿಂಗೇಶ್ವರಪ್ಪ, ಬಿ.ಟಿ. ಮರುಳಸಿದ್ದಪ್ಪ, ಎಸ್.ಎಂ. ಗುರುಸಿದ್ದಪ್ಪ, ಏನ್.ಎಂ. ಕೊಟ್ರಯ್ಯ ಅಕ್ಕಿ ರಾಜು, ಶಿವಕುಮಾರ್,ಬೇತುರ್ ನಾಗರಾಜ್, ಪ್ರಕಾಶ್, ಚೌಡಪ್ಪ, ವೀರೇಶ್, ಹನುಮಂತಪ್ಪ, ನಾಗರಾಜ್, ತಿಪ್ಪೇಸ್ವಾಮಿ, ರುದ್ರೇಶ್, ತಾಜ್ ಪೀರ್, ಮಂಜುನಾಯ್ಕ, ತಿಪ್ಪೇಶ್ ಗುತ್ತಿಗೆದಾರ ರಮೇಶ್ ಇಂಜಿನಿಯರ್ ಮುರುಗೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.