ಬಸಾಪಟ್ಟಣ: ವಾಸವಿ ಮಂಗಲ ಭವನ ಉದ್ಘಾಟನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.24: ತಾಲೂಕಿನ ಬಸಾಪಟ್ಟಣದಲ್ಲಿ ಶ್ರೀ ವಾಸವಿ ಮಂಗಲ ಭವನ ಉದ್ಘಾಟನೆ ಅಂಗವಾಗಿ ಆರ್ಯವೈಶ್ಯ ಯುವ ಜನ ಸಂಘದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಬೆಳಿಗ್ಗೆ ರಕ್ಷೋಜ್ಞ ಹೋಮ, ಪುಣ್ಯವಾಚನ, ದೇವತಾ ಪ್ರತಿಷ್ಠಾಪನೆ, ಮಹಾಮಂಗಳಾರತಿ ಮಾಡಲಾಯಿತು. ನಂತರ ಗೋಪೂಜೆ ಮತ್ತು ಶ್ರೀವಾಸವಿ ಮಂಗಲ ಭವನ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಸಂಘದ ಗೌರವ ಅಧ್ಯಕ್ಷ ಸತ್ಯನಾರಾಯಣಬಾಬು, ಅಧ್ಯಕ್ಷ ಸಂತೋಷ ಗುಡಿಕೋಟೆ, ಕಾರ್ಯದರ್ಶಿ ಬಾಲಗುರು, ಸಮಾಜದ ಹಿರಿಯ ಮುಖಂಡರಾದ ಛಾಯಣ್ಣ ಶೇಟ್ಟರ,  ಶ್ರೀನಿವಾಸ ಇಂದರಗಿ, ಯಲ್ಲಯ್ಯಶೆಟ್ಟಿ, ಮಲ್ಲಯ್ಯ ಇಂದರಗಿ, ಹನುಮೇಶ ವಡ್ಡರಹಟ್ಟಿ, ರಾಘವೇಂದ್ರ ಸೇರಿದಂತೆ ಮಹಿಳಾ ಮಡಳಿಯ ಸದಸ್ಯರು, ಯುವಕರು ಪಾಲ್ಗೊಂಡಿದ್ದರು.

One attachment • Scanned by Gmail