
ಬಸವನಬಾಗೇವಾಡಿ:ಆ.22: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಕಾರ್ಯಕರ್ತರು ರೋಗಿಗಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿಯನ್ನ ಆಚರಣೆ ಮಾಡಿದರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ ಇಂದಿನ ಅಧುನಿಕ ಯುಗದಲ್ಲಿ ಜನರು ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರ ಹಾವಿನ ಮೂರ್ತಿಗೆ ಹಾಲು ಎರೆಯುವ ಮೂಲಕ ಮೂಡನಂಬಿಕೆಯನ್ನ ಆಚರಣೆ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ, ಈ ನಿಟ್ಟಿನಲ್ಲಿ ರಾಷ್ಟ್ರೀಯ ಬಸವ ಸೈನ್ಯ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೋಗಗಳಿಗೆ ಹಾಲು ನೀಡುತ್ತಿದೆ, ಮಾನವ ಮೂಡನಂಬಿಕೆಯನ್ನ ಬಿಟ್ಟು ಜ್ಞಾನದಿಂದ ಮುನ್ನಡೆದಾಗ ಮಾತ್ರ ಜಗತ್ತು ಸ್ವರ್ಗವಾಗಲು ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ತಾಲೂಕಾ ಅಧ್ಯಕ್ಷ ಸಂಜು ಬಿರಾದಾರ, ಶ್ರೀಧರ ಕುಂಬಾರ, ಮಂಜುನಾಥ ಜಾಲಗೇರಿ, ವಿಶ್ವನಾಥ ಹಿರೇಮಠ, ಶ್ರೀಕಾಂತ ಪಟ್ಟಣಶೆಟ್ಟಿ, ಸಂಗಮೇಶ ಜಾಲಗೇರಿ, ಸಂಗಮೇಶ ಗೊಳಸಂಗಿ, ರಫೀಕ ಹೊಕ್ರಾಣಿ ಸೇರಿದಂತೆ ಮುಂತಾದವರು ಇದ್ದರು.