ಬಸವ ಸೇವಾ ಪ್ರತಿಷ್ಠಾನಕ್ಕೆ ಡಾ. ಗಂಗಾಂಬಿಕೆ ಅಕ್ಕ ಅಧ್ಯಕ್ಷೆ

ಬೀದರ್:ಜೂ.1: ಅಕ್ಕ ಅನ್ನಪೂರ್ಣತಾಯಿ ಅವರ ನಿಧನದಿಂದ ತೆರವಾದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಡಾ. ಗಂಗಾಂಬಿಕೆ ಅಕ್ಕ ಅವರನ್ನು ನೇಮಕ ಮಾಡಲಾಗಿದೆ.
ನಗರದ ಶರಣ ಉದ್ಯಾನದಲ್ಲಿ ಬುಧವಾರ ನಡೆದ ಬಸವ ಪರ ಸಂಘಟನೆಗಳ ಪ್ರಮುಖರು, ಸಮಾಜದ ಗಣ್ಯರು, ಪ್ರತಿಷ್ಠಾನದ ಭಕ್ತರು ಹಾಗೂ ಮಹಿಳೆಯರ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಅವರನ್ನು ನೇಮಕ ಮಾಡಲಾಯಿತು.
ಬಸವ ಸೇವಾ ಪ್ರತಿಷ್ಠಾನದ ಬೆಳವಣಿಗೆಯಲ್ಲಿ ಅಕ್ಕ ಅನ್ನಪೂರ್ಣತಾಯಿ ಹಾಗೂ ಡಾ. ಗಂಗಾಂಬಿಕೆ ಅಕ್ಕ ಅವರ ಪಾತ್ರವಿದೆ. ಅಕ್ಕ ಅನ್ನಪೂರ್ಣತಾಯಿ ಅವರು ನಿಧನರಾದ ಕಾರಣ ಡಾ. ಗಂಗಾಂಬಿಕೆ ಅಕ್ಕ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡು ಪ್ರತಿಷ್ಠಾನವನ್ನು ಮುನ್ನಡೆಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡವರು ಮನವಿ ಮಾಡಿದರು.
ಬಸವ ಸೇವಾ ಪ್ರತಿಷ್ಠಾನದ ಮೂಲಕ ಪ್ರತಿ ಭಾನುವಾರ ಪ್ರಾರ್ಥನೆ, ಹುಣ್ಣಿಮೆಗೆ ಮಾಸಿಕ ಶರಣ ಸಂಗಮ, ಪ್ರತಿ ವರ್ಷ ವಚನ ವಿಜಯೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಒಪ್ಪಿಗೆ ನೀಡಲಾಯಿತು. ಗಂಗಾಂಬಿಕೆ ಅಕ್ಕ ಅವರ ನಂತರವೂ ಪ್ರತಿಷ್ಠಾನವನ್ನು ಮಹಿಳೆಯರಿಗಾಗಿಯೇ ಮೀಸಲಿಡಲು ತೀರ್ಮಾನಿಸಲಾಯಿತು.
ಬಸವ ಸೇವಾ ಪ್ರತಿಷ್ಠಾನದ ಸಭೆ ಕರೆದು ನಿರ್ಣಯ ಕೈಗೊಳ್ಳುವವರೆಗೆ ಪೂಜೆ, ಪ್ರಾರ್ಥನೆ, ಭಜನೆ, ಹುಣ್ಣಿಮೆ, ಶರಣ ಸಂಗಮ, ವಚನ ವಿಜಯೋತ್ಸವ ಬಿಟ್ಟು ಪ್ರತಿಷ್ಠಾನ ವ್ಯಾಪ್ತಿಯಲ್ಲಿ ಯಾರೊಬ್ಬರೂ ಬೇರೆ ಚಟುವಟಿಕೆಗಳನ್ನು ನಡೆಸದಿರುವಂತೆ ನಿರ್ಣಯಿಸಲಾಯಿತು.
ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚಿಸಿ, ವಿವಾದವನ್ನು ಸಮಾಧಾನಕರವಾಗಿ ಇತ್ಯರ್ಥಪಡಿಸಲು ಸಮಾಜದ ಗಣ್ಯರನ್ನು ಒಳಗೊಂಡ ಬಸವ ಸೇವಾ ಪ್ರತಿಷ್ಠಾನ ಸಾರ್ವಜನಿಕ ಸಮಿತಿಯನ್ನು ರಚಿಸಲಾಯಿತು. ಎಲ್ಲರನ್ನು ಕರೆದು ವಿವಾದ ಬಗೆಹರಿಸಲು ಸಮಿತಿಗೆ ಅಧಿಕಾರ ನೀಡಲಾಯಿತು ಎಂದು ಬಸವ ಸೇವಾ ಪ್ರತಿಷ್ಠಾನ ಸಾರ್ವಜನಿಕ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ತಿಳಿಸಿದ್ದಾರೆ.
ಸಮಿತಿಯ ಪದಾಧಿಕಾರಿಗಳು: ಶಿವಶರಣಪ್ಪ ವಾಲಿ (ಅಧ್ಯಕ್ಷ), ಸೋಮಶೇಖರ ಪಾಟೀಲ ಗಾದಗಿ (ಕಾರ್ಯಾಧ್ಯಕ್ಷ), ರಾಜೇಂದ್ರ ಜೊನ್ನಿಕೇರಿ (ಕಾರ್ಯದರ್ಶಿ), ಬಿ.ಜಿ. ಶೆಟಕಾರ್, ಬಾಬುವಾಲಿ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ದೀಪಕ್ ವಾಲಿ, ರಾಜೇಂದ್ರಕುಮಾರ ಗಂದಗೆ, ಡಾ. ರಜನೀಶ್ ವಾಲಿ, ವಿರೂಪಾಕ್ಷ ಗಾದಗಿ, ಬಂಡೆಪ್ಪ ಕಂಟೆ, ಪ್ರಭುರಾವ್ ವಸ್ಮತೆ, ಸುರೇಶ ಚನಶೆಟ್ಟಿ, ಸಿದ್ಧಯ್ಯ ಕಾವಡಿಮಠ, ಕುಶಾಲರಾವ್ ಪಾಟೀಲ ಖಾಜಾಪುರ, ಸಂಜುಕುಮಾರ ಪಾಟೀಲ, ಪ್ರಕಾಶ ಸುಕಾಲೆ, ಉಮೇಶ ಗಾಯಗೊಂಡೆ, ವಿರೇಶಕುಮಾರ ಮಜ್ಜಗೆ, ರಾಚಪ್ಪ ಪಾಟೀಲ, ಶಂಕರೆಪ್ಪ ಹೊನ್ನಾ, ಶಿವರಾಜ ಮದಕಟ್ಟಿ, ವಿಶ್ವನಾಥ ಕಾಜಿ, ಹಾವಶೆಟ್ಟಿ ಪಾಟೀಲ, ವೈಜಿನಾಥ ಕಮಠಾಣೆ, ಜೈರಾಜ ಖಂಡ್ರೆ, ರೇವಣಸಿದ್ದಪ್ಪ ಜಲಾದೆ, ವೀರಭದ್ರಪ್ಪ ಬುಯ್ಯಾ, ಚಂದ್ರಶೇಖರ ಹೆಬ್ಬಾಳೆ (ಸದಸ್ಯರು).
ಮಹಿಳಾ ಸಮಿತಿ ಪದಾಧಿಕಾರಿಗಳು: ಶಕುಂತಲಾ ಬೆಲ್ದಾಳೆ (ಅಧ್ಯಕ್ಷೆ), ಉಷಾ ಮಿರ್ಚೆ, ಶಾಂತಾ ಖಂಡ್ರೆ, ಸುವರ್ಣಾ ಚಿಮಕೋಡೆ, ವಿದ್ಯಾವತಿ ಬಲ್ಲೂರ, ಸುಮಾ ಭೂಶೆಟ್ಟಿ, ಜಯದೇವಿ ಯದಲಾಪುರೆ, ಡಾ. ವಿಜಯಶ್ರೀ ಬಶೆಟ್ಟಿ, ಜ್ಞಾನದೇವಿ ಬಬಛೆಡೆ, ಶಾಂತಾಬಾಯಿ ಬಿರಾದಾರ ಹಾರೂರಗೇರಿ, ಕರುಣಾ ಶೆಟಕಾರ್, ವಿಜಯಲಕ್ಷ್ಮಿ ಗಡ್ಡೆ, ನಿರ್ಮಲಾ ಕಲ್ಯಾಣಿ, ಜಯದೇವಿ ಮದಕಟ್ಟಿ, ವಿದ್ಯಾವತಿ ಬಿರಾದಾರ, ಭಾರತಿ ವಸ್ತ್ರದ್, ಪಾರ್ವತಿ ಸೋನಾರೆ, ರಾಣಿ ಪಸರ್ಗೆ (ಸದಸ್ಯರು).
ಡಾ. ಗಂಗಾಂಬಿಕೆ ಅಕ್ಕ ಸಭೆಯ ನೇತೃತ್ವ, ಸಮಾಜದ ಹಿರಿಯ ಮುಖಂಡ ಶಿವಶರಣಪ್ಪ ವಾಲಿ ಅಧ್ಯಕ್ಷತೆ ವಹಿಸಿದ್ದರು. ಸುಮಾ ಭೂಶೆಟ್ಟಿ ಸ್ವಾಗತಿಸಿದರು. ಸುವರ್ಣಾ ಚಿಮಕೋಡೆ ನಿರೂಪಿಸಿದರು. ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಅಕ್ಕ ಅನ್ನಪೂರ್ಣತಾಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ: ಜೂನ್ 2 ರಂದು ಬೆಳಿಗ್ಗೆ 11ಕ್ಕೆ ಬಸವಗಿರಿಯಲ್ಲಿ ನಡೆಯಲಿರುವ ಅಕ್ಕ ಅನ್ನಪೂರ್ಣತಾಯಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ. ಗಂಗಾಂಬಿಕೆ ಅಕ್ಕ ಮನವಿ ಮಾಡಿದ್ದಾರೆ.