ಬಸವ ಸಮಿತಿ ಟ್ರಸ್ಟ್ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮ

ಬೀದರ: ನ.13:ಬಸವ ಸಮಿತಿ ಟ್ರಸ್ಟ್ (ರಿ) ಮರಖಲ ತಾ.ಜಿ.ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೀದರ ಇವರ ಸಂಯುಕ್ತಾಶ್ರಯದಲ್ಲಿ 2021-2022 ನೇ ಸಾಲಿನ ವಿಚಾರ ಸಂಕೀರ್ಣ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನುಮರಖಲ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಡಾ. ಎಂ.ಜಿ. ದೇಶಪಾಂಡೆ ರವರು ಉದ್ಘಾಟಿಸಿದರು ಹಾಗೂ ಮಾತನಾಡುತ್ತ ನುಡಿದರೆ ಮುತ್ತಿನ ಹಾರದಂತಿರಬೇಕು, ಮಾತುಗಳು ಮನುಷ್ಯನ ಕೆಟ್ಟ ಆಲೋಚನೆಗಳಿಗೆ ಬಲಿಯಾಗದಂತೆ ಇರಬೇಕು. ಅದು ಸತ್ಸಂಗ ಎಂದರು. ಸಮಾಜದಲ್ಲಿ ಲೇಸು ಎನಿಸುಕೊಂಡು ಒಂದು ದಿನ ಬದುಕಬೇಕು, ಅದು ಜೀವನ ಸಾರ್ಥಕತೆ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಾನಪದ ಹಿರಿಯ ಕಲಾವಿದರಾದ ಶ್ರೀಮತಿ ಸುನೀತಾ ಬಿಕಲೆ (ನಿರೂಪಕರು, ಬಹುಮುಖ ಪ್ರತಿಭೆ ಕಲಾವಿದರು) ಜಾನಪದ ಗಾಯನ ನಡೆಸಿಕೊಟ್ಟರು. ತದನಂತರ ವಚನ ಗಯನವನ್ನು ಶ್ರೀ ಚನ್ನಬಸವ ಬಿಕಲೆ (ಸಂಗೀತಗಾರರು ಹಾಗೂ ಪ್ರವಚನಕಾರರು) ಇವರು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ವೀರಭದ್ರಪ್ಪಾ ಬುಯ್ಯಾ, ಅಧ್ಯಕ್ಷರು, ಬಸವ ಸಮಿತಿ ಮರಖಲ ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ವೈಜಿನಾಥ ಬುಯ್ಯಾ ಗ್ರಾಮದ ಮುಖಂಡರು ಹಾಗೂ ಅತಿಥಿಗಳಾಗಿ ಶ್ರೀ ಚಂದ್ರಕಾಂತ ಬಂಡೆಪ್ಪಾ ಬುಯ್ಯಾ, ಅಧ್ಯಕ್ಷರು, ಗ್ರಾ.ಪಂ. ಮರಖಲ ರವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿಯವರಾದ ಶ್ರೀ ರವಿಕಿರಣ ನೇಳಗೆ ಇವರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಂಡು ಹೋಗಲು ಸಹಕರಿಸಿದರು.
ಗೌರವ ಉಪಸ್ಥಿತಿ ಶ್ರೀ ವೈಜಿನಾಥ ಮಹಾರಾಜ, ಶ್ರೀ ಶಿವರಾಜ ಬಿರಾದಾರ ನಿವೃತ್ತ ಶಿಕ್ಷಕರು, ಶ್ರೀ ಶಿವರಾಜ ಪಾಟೀಲ, ಶ್ರೀ ವೀರಶೆಟ್ಟಿ ಬಿರಾದಾರ ಇಂಜಿನೀಯರರು, ಶ್ರೀ ಸೋಮಶೇಖರ ಓಂಕಾರೆ, ಸದಸ್ಯರು, ಗ್ರಾ.ಪಂ.ಮರಕಲ ಹಾಗೂ ಶ್ರೀ ಗಣಪತಿ ಬುಯ್ಯಾ ರವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಣಪತಿ ಬುಯ್ಯಾ ರವರು ಸ್ವಾಗತಿಸಿದರೆ ಕಾರ್ಯಕ್ರಮವನ್ನು ಸುನೀತಾ ಬೀಕಲೆ ನಿರೂಪಿಸಿದರು ಹಾಗೂ ಪ್ರಾಸ್ತಾವಿಕ ಚನ್ನಬಸವ ಬೀಕಲೆ ರವರು ನುಡಿದರು.