ಬಸವ ಸಮಿತಿಯಲ್ಲಿ ಬಸವ ಪಂಚಮಿ ಆಚರಣೆ

ಶಹಾಬಾದ:ಆ.22: ತಾಲೂಕಿನ ಭಂಕೂರಿನ ಬಸವ ಸಮಿತಿಯಲ್ಲಿ ಸೋಮವಾರ ನಾಗರ ಪಂಚಮಿ ಹುತ್ತಕ್ಕೆ ಹಾಲು ಹಾಕುವ ಬದಲು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗದಗಿನ ಬಸವ ತತ್ವ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿ ಮೌಢ್ಯತೆಯ ವಿರುದ್ಧ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದ್ದರು. ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವನ್ನು ವೈದಿಕರು ಮಾಡಿಕೊಂಡು ಬಂದಿರುವುದು ಅವೈಜ್ಞಾನಿಕ. ಬಸವಣ್ಣನವರ ಆದರ್ಶಗಳನ್ನು ಸಕಾರಗೊಳಿಸಲು ಮಕ್ಕಳಲ್ಲಿಯೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕೆಂದರು. ಬಸವ ಸಮಿತಿಯ ಶಾಲೆಯ ಸುಮಾರು 60 ಮಕ್ಕಳು ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ಬಸವ ಸಮಿತಿ ಪದಾಧಿಕಾರಿಗಳು, ಶಿಕ್ಷಕರು, ಬಸವ ಸಮಿತಿ ನಿವಾಸಿಗಳು ಉಪಸ್ಥಿತರಿದ್ದರು.