ಬಸವ ಶ್ರೀ ನೌಕರರ ಪತ್ತಿನ ಸಹಕಾರಿಸಂಘ : ಪ್ರತಿಭಾ ಪುರಸ್ಕಾರ

ಸಿರವಾರ.ನ.೨೦- ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೆ ಶ್ರದ್ದೆಯಿಂದ ಇನ್ನೂ ಹೆಚ್ಚಿನ ಅಂಕಗಳಿಸಿ ಶಾಲೆಗೆ, ತಾಲೂಕಿಗೆ ಕೀರ್ತಿ ತರುತ್ತಾರೆ ಎಂದು ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘದ ಅದ್ಯಕ್ಷ ಶಂಕರಗೌಡ ಎಸ್.ಪಾಟೀಲ್ ಹೇಳಿದರು.
ಎಸ್.ಎಸ್.ಎಲ್.ಸಿ ಹಾಘೂ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ನೀಯರಿಗೆ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ರೀತಿ ಸನ್ಮಾನಿಸಿದರೆ ಅವರಿಗೆ ಇನ್ನೂ ಹೆಚ್ಚಿನ ಅಂಕಗಳಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘವು ಒಟ್ಟು ೫ ಶಾಖೆಗಳನ್ನು ಹೊಂದಿದೂ, ಸಂಘದಿಂದ ಜಿಲ್ಲೆಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಸಿರವಾರ ತಾಲೂಕ ನೌಕರರ ಸಂಘದ ಅದ್ಯಕ್ಷ ಅಯ್ಯನಗೌಡ ಏರೇಡ್ಡಿ, ಬ್ಯಾಂಕಿ ಸಿಓ ವಿರೇಶ, ವ್ಯವಸ್ಥಾಪಕ ಮೇಘರಾಜ, ಸಿಬ್ಬಂದಿಗಳಾಧ ಬಸವರಾಜ, ನಾಗರಾಜ, ಶ್ವೇತಾ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.

೨೦ ಸಿರವಾರ ೧ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.