ಬಸವ ಮಂಟಪದಲ್ಲಿ ಶರಣ ಸಂಗಮ

ಬೀದರ್:ಫೆ.3: ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲಿಂಗಾಯತ ಸಮಾಜ ವತಿಯಿಂದ ಹುಣ್ಣಿಮೆ ನಿಮಿತ್ತ ಈಚೆಗೆ ಮಾಸಿಕ ಶರಣ ಸಂಗಮ ಕಾರ್ಯಕ್ರಮ ನಡೆಯಿತು.
ಶಿವಯೋಗಿ ಸಿದ್ಧರಾಮೇಶ್ವರರ ಬದುಕು ಹಾಗೂ ವಚನಗಳ ಕುರಿತು ಪೆÇ್ರ. ಶಿವಶರಣಪ್ಪ ಹುಗ್ಗಿ ಪಾಟೀಲ ಮಾತನಾಡಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾವತಿ ಕುಶಾಲರಾವ್ ಪಾಟೀಲ ಖಾಜಾಪುರ ಗುರುಬಸವ ಪೂಜೆ ನೆರವೇರಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ವಿಶ್ವನಾಥ ಉದಗಿರೆ ಪ್ರಾರ್ಥನೆ, ಕಂಟೆಪ್ಪ ಗಂದಿಗುಡಿ ಹಾಗೂ ರಾಚಯ್ಯ ಸ್ವಾಮಿ ವಚನ ಸಂಗೀತ ನಡೆಸಿಕೊಟ್ಟರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ಸಿದ್ದಯ್ಯ ಕಾವಡಿಮಠ, ಮಲ್ಲಿಕಾರ್ಜುನ ಪಂಚಾಕ್ಷಿರೆ, ರಾಜಶೇಖರ ಮಂಗಲಗಿ, ರಾಜೇಂದ್ರ ಜೊನ್ನಿಕೇರಿ, ಸುರೇಶಕುಮಾರ ಸ್ವಾಮಿ, ಸಂಜೀವಕುಮಾರ ಪಿ. ಪಾಟೀಲ ಗೌಡಗಾಂವ್, ವಿವೇಕ ಪಟ್ನೆ, ರಾಜಕುಮಾರ ಕಮಠಾಣೆ, ರಮೇಶ ಪಾಟೀಲ, ಬಸವಕುಮಾರ ಪಾಟೀಲ, ಶೇಷಪ್ಪ ಬಿರಾದಾರ, ಗಣಪತರಾವ್ ಪಾಟೀಲ, ಸಿದ್ದರಾಮ ಶೆಟಕಾರ್, ಸಂಜು ಪಾಟೀಲ ಚೊಂಡಿ ಇದ್ದರು.
ಗಣೇಶ ಬಿರಾದಾರ ಸ್ವಾಗತಿಸಿದರು. ರವಿ ಪಾಪಡೆ ನಿರೂಪಿಸಿದರು. ಆನಂದ ಪಾಟೀಲ ವಂದಿಸಿದರು.