ಬಸವ ಭಕ್ತರ ಸಂಭ್ರಮಾಚರಣೆ

ಹುಮನಾಬಾದ : ಜ.19:ಬಸವನಗರ ಬಡಾವಣೆಯ ಬಸವೇಶ್ವರ ವೃತ್ತದಲ್ಲಿ ವಿಶ್ವ ಗುರು ಬಸವಣ್ಣನವರನ್ನು ನಾಡಿನ ಸಂಸ್ಕøತಿಕ ಚಿಂತಕರು ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದ ಪ್ರಯುಕ್ತವಾಗಿ ಬಸವ ಜಾಗ್ರತ ಸಮಿತಿ ಹುಮನಾಬಾದ ಗುರು ಬಾವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸರಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು, ಬಸವ ಜಾಗ್ರತ ಸಮಿತಿ ಅಧ್ಯಕ್ಷರಾದ ಬಾಬುರಾವ ವಾಡೆ ಮಾತನಾಡಿ 12 ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಸ್ತ್ರೀ ಸ್ವಾತಂತ್ರ್ಯ ಕಾಗಿ ಸಕಲರಿಗೆ ಲೆಸನ್ನೆ ಬಯಸಿದ ಮಹಾ ಚಿಂತಕರಾಗಿ ಮನುಕುಲದ ಉದಾರಕರಾಗಿ 800 ವರ್ಷಗಳ ಹಿಂದೆ ಅವರು ನೀಡಿದ ಸಾಂಸ್ಕೃತಿಕ ಚಿಂತನೆ ನಮ್ಮ ದಾರಿ ದೀಪ ಅವರ ತತ್ವ ಅನುಷ್ಠಾನ ನಮ್ಮ ಬಾಳಿನ ಬೆಳಕಾಗಲಿ ಎಂದು ನುಡಿದರು, ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಸಿದ್ಧಲಿಂಗ ವಿ ನಿರ್ಣಾ ಮಾತನಾಡಿ ವಚನ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರು ಕರ್ನಾಟಕವಲ್ಲ ಈಡಿ ಜಗತ್ತಿನ ಸಾಂಸ್ಕೃತಿಕ ನಾಯಕರಾಗಿದ್ದರು.ಮೂಢ ನಂಬಿಕೆ, ಅಸಮಾನತೆ ಖಂಡಿಸಿದವರು. ದಯವೇ ಧರ್ಮ ಕಾಯಕ ಕಲ್ಪನೆ ಇಂಥ ಅದ್ಭುತ ಸಂಸ್ಕೃತಿಯ ವಾರಸುದಾರರದ ಗುರು ಬಸವಣ್ಣ ನವರನ್ನು ಕರ್ನಾಟಕ ಘನ ಸರಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಕೆ ಕರ್ನಾಟಕ ಸರಕಾರಕ್ಕೆ ಅಭಿನಂದನೆಗಳು ಎಂದು ನುಡಿದರು, ಕಾರ್ಯಕ್ರಮದ್ದಲಿ ಡಾ. ನಾಗೆಂದ್ರಪ್ಪಾ ಧುಮನಸೋರ ವಹಿಸಿಕೋಂಡಿದರು ಬಸವ, ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷರಾದ ಚನ್ನಬಸಪ್ಪ ವಡ್ಡನಕೆರಿ ವಚನ ಪಠಣ ನೆರವೇರಿಸಿದರು, ಬಡಾವಣೆಯ ಹಿರಯರಾದ ಡಿಸಿ ಬೀರಾದರ, ಶಂಕರ ರಾಂಪುರೆ, ಸಿದ್ದಪ್ಪ ಮುಗಳಿ, ಶಾಂತಪ್ಪ ದುಬುಲಗುಂಡಿ, ಶಾಮರಾವ , ಮಾಣಿಕರಾವ ಪಾಟೀಲ, ಚಂದ್ರಕಾಂತ ,ಪಂಡರಿನಾಥ ಹುಗಿ ಸಿದ್ದು ಕಣಜಿ ಭಾಗವಹಿದರು ಮಲ್ಲಿಕಾರ್ಜನ ಸಂಗಮಕರ ನಿರೂಪಿಸಿ ಸ್ವಾಗತಿಸಿದರು , ಪಂಡಿತ ಬಾಳುರೆ ವಂದಿಸಿದರು..ಅನೇಕ ಬಸವನಗರ ಶಿವನಗರ ಬಡಾವಣೆಯ ಬಸವ ಭಕ್ತರಿದ್ದರು