ಬಸವ, ಬುದ್ದ, ವಿವೇಕರ ಆದರ್ಶಗಳನ್ನು ಅನುಸರಿಸಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು:ಜ:10: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ  ಹದಿಹರೆಯದವರ ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಈಗಿನ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಾಧಕ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸುವಂತೆ ಕಿವಿಮಾತು ಹೇಳಿದರು, ವಿಶ್ವೇಶ್ವರಯ್ಯ, ಕಲಾಂ, ವಿವೇಕಾನಂದ, ಬುದ್ಧ, ಬಸವ, ಬೇಂದ್ರೆ,ಕುವೆಂಪು ಇಂತಹ ಅನೇಕರ ಆದರ್ಶಗಳು ಮಾದರಿಯಾಗಬೇಕು,  ಆಗ ಉತ್ತಮ ಪ್ರಜೆಯಾಗಲು ಸಾಧ್ಯ,  ಅವಶ್ಯಕತೆಗನುಸಾರ ಹೊಸ ಹೊಸ ತಂತ್ರಜ್ಞಾನ ಬಳಸಬೇಕು, ಮೊಬೈಲ್ ಬಳಕೆ ಚಟವಾಗಬಾರದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರೌಢಾವಸ್ಥೆಯಲ್ಲಿ ಸಹಜವಾಗಿ ಬರುವ ತೊಂದರೆಗಳನ್ನು ದೂರಮಾಡಲು ಆರ್.ಕೆ.ಎಸ್.ಕೆ ಕಾರ್ಯಕ್ರಮದಡಿ ಸ್ನೇಹಾ ಕ್ಲಿನಿಕ್, ಆರೋಗ್ಯ ಸಹಾಯವಾಣಿ ಯಂತಹ ಯೋಜನೆಯ ಸಹಾಯ ಪಡೆದುಕೊಳ್ಳಬೇಕು, ಪೌಷ್ಟಿಕ ಆಹಾರ, ವೈಯಕ್ತಿಕ ಶುಚಿತ್ವದ ಬಗ್ಗೆ ಗಮನ ಹರಿಸಬೇಕು, ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ, ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಕೆಟ್ಟ ಚಟಗಳ ಗೋಜಿಗೆ ಹೋದರೆ ಬಾಳು ನಾಶ ವಾಗುವುದು ಖಚಿತ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ತೋರಣಗಲ್ಲು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯಾಸ್ಮಿನ್ ಅವರು ಎಂಟು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎನ್.ಎಮ್.ಎಮ್.ಎಸ್ ಮತ್ತು ಎನ್.ಟಿ.ಎಸ್.ಇ ಪುಸ್ತಕಗಳನ್ನು ವಿತರಣೆ ಮಾಡಿ ಪರೀಕ್ಷೆಯನ್ನು ಎದುರಿಸಲು ಚೆನ್ನಾಗಿ ಅಭ್ಯಾಸ ಮಾಡಿ ಸಿದ್ದರಾಗಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪರೀಕ್ಷೆಗಳು ಸಹಾಯವಾಗಲಿವೆ ಎಂದು ಸಲಹೆ ನೀಡಿದರು,
ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್, ಶಾಲೆಯ ಸಹ ಶಿಕ್ಷಕರಾದ ಹೇಮಪ್ರಭ, ಶರಣಬಸವ,ವಿರುಪಾಕ್ಷಪ್ಪ,ಮಹಂತೇಶ್,ಅಶೋಕ್,ಶಾರದ,ರೇಖಾ,ಮಾಲ, ಮುಖ್ಯ ಶಿಕ್ಷಕ ಧರಿಯಪ್ಪ ರಾಥೋಡ್ ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.