ಬಸವ ಪರಿಸರ ಸಂರಕ್ಷಣಾ ವೇದಿಕೆ ಯಿಂದ ಬಸವ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ, ಮೇ 16; ಕಾಯಕಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ ಮತ್ತು ವಿನಾಯಕ ಭಜನಾ ಮಂಡಳಿ, ಆವರಗೆರೆ ಇವರ ಆಶ್ರಯದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ನಂತರ ಸಭಾ ಕಾರ್ಯಕ್ರಮವನ್ನು ದಾವಣಗೆರೆ ಭಾಗದ ಹೆಸರಾಂತ ವಕೀಲರಾದ  ಎಲ್.ಹೆಚ್. ಅರುಣ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಮಾನವತಾವಾದಿ ಮತ್ತು ಶ್ರೇಷ್ಠ ಚಿಂತಕರಾಗಿದ್ದರು. 12ನೇ ಶತಮಾನದಲ್ಲಿ ಅವರು ಆರಂಭಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆ ಎಂದು ಕರೆಯಲಾಗುತ್ತದೆ. ಅವರ ಚಿಂತನೆ ಮತ್ತು ವಚನಗಳು ಮಾನವ ಕಲ್ಯಾಣವನ್ನು ಬಯಸುವ ಅನೇಕ ಜನರಿಗೆ ಸ್ಫೂರ್ತಿಯಾಗಿವೆ. ಬಸವಣ್ಣನವರ ಆದರ್ಶಗಳ ತಳಹದಿಯಲ್ಲಿ ಬಸವ ಪರಿಸರ ವೇದಿಕೆಯು ಸಮಾಜ ಮುಖಿ ಮತ್ತು ಗ್ರಾಮಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಗ್ರಾಮೀಣ ಸೊಗಡಿನ ಆಚರಣೆಗಳು ಪರಿಸರ ಸಂರಕ್ಷಣೆ ಈ ಗ್ರಾಮದಲ್ಲಿ ಸತತವಾಗಿ ನಡೆಯುತ್ತಿರುವುದು ಹರ್ಷದಾಯಕವಾಗಿದೆ ಮತ್ತು ಮಾದರಿಯಾಗಿದೆ. ಯುವ ಜನಾಂಗ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಿರಿಯರ ಸಹಾಯದೊಂದಿಗೆ ಮಾಡುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂದು ಶ್ಲಾಘಿಸಿದರು.ಬಾನಪ್ಪನವರು ಪ್ರ‍್ರಾಸ್ತಾವಿಕವಾಗಿ ಮಾತನಾಡಿ, ಬಸವ ಪರಿಸರ ವೇದಿಕೆ ಇಡೀ ಗ್ರಾಮವನ್ನು ಹಸಿರು ತಾಣವನ್ನಾಗಿ ಮಾಡಿದ್ದು, ವೇದಿಕೆಯ ಕಾರ್ಯಕರ್ತರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಮೀಣ ಬದುಕಿನ ರೈತರು ಉಪಯೋಗಿಸುತ್ತಿದ್ದ ವಸ್ತುಗಳನ್ನೇ ಕಲಾತ್ಮಕವಾಗಿ ಗ್ರಾಮಗಳಲ್ಲಿ ಸ್ಥಾಪಿಸುವ ಮೂಲಕ ಗ್ರಾಮೀಣ ಭಾರತವನ್ನು ಪರಿಚಯಿಸಿz್ದÁರೆ ಎಂದು ತಿಳಿಸಿದರು.ಶಿಕ್ಷಕರಾದ ಶ್ರೀಯುತ ಗುರುಸಿದ್ಧಸ್ವಾಮಿ ಅವರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು ಅಲ್ಲದೆ ವಿಜ್ಞಾನ ಮತ್ತು ಪರಿಸರ ಸಂಯೋಗವಾದಾಗ ಮಾನವನ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಎನ್.ಟಿ.ರುದ್ರಪ್ಪನವರು ಮಾತನಾಡಿ, ಯುವ ಸಮೂಹ ಮೊಬೈಲನ್ನು ಬದಿಗೊತ್ತಿ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಗಬೇಕೆಂದು ಕರೆಕೊಟ್ಟರು.

ವೇದಿಕೆ ಮೇಲೆ ಮಲ್ಲಿಕಾರ್ಜುನ ಸಿಪಿ, ತಿಪ್ಪೇಶ್, ಹಾಲೇಶಣ್ಣ, ಕರಿಬಸಣ್ಣ ಡಿ, ಸಿಎಂ ಅರುಣ್, ಕೇರ್ನಳ್ಳಿ ರಾಜು, ಮಾಂತೇಶ್, ಗೋಪಿನಾಥ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.