ಬಸವ ಪಂಚಮಿ ಆಚರಣೆ

ಬೀದರ:ಆ.3: ಬೀದರನ ಮೈಲೂರನಲ್ಲಿ ಮಾನವ ಬಂಧುತ್ವ ವೇದಿಕೆ , ಬುಧ್ದ ಬಸವ ಅಂಬೇಡ್ಕರ್ ಯುವ ಸಂಘ ಹಾಗೂ ಬುಧ್ದ ಬೆಳಕು ಟ್ರಸ್ಟ್ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಬಸವ ಪಂಚಮಿ ಆಚರಣೆ ಮಾಡಲಾಯಿತು

ಮಕ್ಕಳಿಗೆ ಹಾಲು ವಿತರಿಸಿ ಬುಧ್ದ ಬಸವ ಅಂಬೇಡ್ಕರ್ ಯುವ ಸಂಘ ಹಾಗೂ ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ ಬೆಳಗಾವಿಯ ವೈಚಾರಿಕ ರಾಜಕಾರಣಿ ಸತೀಶ ಜಾರಕಿಹೊಳಿ ರವರು ಮಾನವ ಬಂಧುತ್ವ ವೇದಿಕೆ ಮೂಲಕ ನಾಡಿನಾದ್ಯಂತ ಪ್ರತಿವರ್ಷ ನಾಗರಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸಿ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸುತ್ತಾರೆ ಮಕ್ಕಳಲಿರುವ ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿಸಿ ಪೌಷ್ಟಿಕ ಆಹಾರ ಸೇವನೆ ಮಾಡುವಂತೆ ತಿಳಿಸುತ್ತಾರೆ ಹಾಗೂ ಅದೆ ರೀತಿ 6 ಡಿಸೆಂಬರ್ ಡಾ.ಅಂಬೇಡ್ಕರ್ ರವರ ಪರಿನಿರ್ವಾಣ ದಿನದಂದು ಸ್ಮಶಾನ ಭೂಮಿಯಲ್ಲಿ ಕಾರ್ಯಕ್ರಮ ರೂಪಿಸಿ ಸ್ಮಶಾನ ಭೂಮಿ ಬಗ್ಗೆ ಜನರಲಿರುವ ಭಯ ಮತ್ತು ಮೂಢನಂಬಿಕೆಯನ್ನು ದೂರ ಮಾಡಲು ನಿರಂತರ ಜಾಗೃತಿ ಮೂಡಿಸಿ ಬುಧ್ದ ಬಸವ ಅಂಬೇಡ್ಕರ್ ರವರ ತತ್ವ ,ವಿಚಾರ ವೈಚಾರಿಕ ಹಿನ್ನಲೆ ಜನರಿಗೆ ತಿಳಿಸುತ್ತಿದ್ದಾರೆ

ಸತೀಶ್ ಜಾರಕಿಹೊಳಿರವರ ಮಹತ್ವದ ಕಾರ್ಯವನ್ನು ಬೆಂಬಲಿಸಿ ಇಂದು ಬೀದರನಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಬುಧ್ದ ಬಸವ ಅಂಬೇಡ್ಕರ್ ರವರ ವೈಚಾರಿಕ ಸಂದೇಶ ಮತ್ತು ಹಾಲಿನಲ್ಲಿರುವ ಪೌಷ್ಟಿಕಾಂಶದ ಬಗ್ಗೆ ತಿಳಿಸಲಾಯಿತು.

ಮುಂದಿನ ದಿನಗಳಲ್ಲಿ ಬೀದರ ಜಿಲ್ಲಾಯಾದ್ಯಂತ ಪ್ರತಿ ಹಳ್ಳಿಗಳಲ್ಲಿ ಬಸವ ಪಂಚಮಿ ಆಚರಿಸಲು ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ಬುಧ್ದ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಮಹೇಶ ಗೋರನಾಳಕರ್, ಅಭಿಧಮ್ಮ ಗೋರನಾಳಕರ್, ವಿಶ್ವನಾಥ, ತನುಶ್ರೀ, ಹರ್ಷಿತ ಕರಕ್ಕನಳ್ಳಿ, ಮಧುಶ್ರಿ ಕರಕ್ಕನಳ್ಳಿ, ಸಿದ್ದಾರ್ಥ, ಸೋನಿ , ಚಿನ್ನಿ ಉಪಸ್ಥಿತರಿದ್ದರು