ಬಸವ ಪಂಚಮಿ ಆಚರಣೆ – ವಚನ ಪಠಣ ಅಭಿಯಾನಕ್ಕೆ ಚಾಲನೆ

ಬೀದರ:ಆ.3:ವಿಶ್ವಗುರು ಬಸವಣ್ಣನವರು ಬಯಲಾದ ಶ್ರಾವಣ ಶುದ್ಧ ಪಂಚಮಿ ಆಚರಣೆಯೊಂದಿಗೆ ‘ವಚನ ಪಠಣ ಅಭಿಯಾನಕ್ಕೆ’ ಚಾಲನೆ ನೀಡಲಾಯಿತು. ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಬಸವಾನುಯಾಯಿಗಳು ದಿನಾಲು 101 ವಚನಗಳನ್ನು ಓದುವ ಪರಿಪಾಠವನ್ನು ಲಿಂಗಾಯತ ಮಹಾಮಠ ಮತ್ತು ಬಸವ ಸೇವಾ ಪ್ರತಿಷ್ಠಾನಗಳಿಂದ ಹಾಕಲಾಗಿದೆ. ಸಮಾಜದಲ್ಲಿ ವಚನಗಳನ್ನು ಓದಿಸುವ ಮೂಲಕ ಅರಿವಿನ ಬೆಳಕು ಬೆಳಗಿಸುವ ಅರ್ಥಪೂರ್ಣ ಕಾರ್ಯವೇ ವಚನ ಪಠಣ ಅಭಿಯಾನ. ವಚನಗಳಲ್ಲಿ ಬದುಕಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಅವುಗಳ ಓದಿನಿಂದ ಮಾನಸಿಕ ಶಾಂತಿ – ನೆಮ್ಮದಿಗಳು ಲಭಿಸುವವು. ಭಕ್ತಿ ಬಲಗೊಳ್ಳುವುದು. ಮಕ್ಕಳ ಬುದ್ಧಿ ಬೆಳೆಯುವುದು. ವಚನಗಳು ಮಂತ್ರಗಳು. ಅವು ದೇವರ ಸಾಮಿಪಕ್ಕೆ ಕರೆದೊಯ್ಯುವವು. ಆದ್ದರಿಂದ ಶರಣ ಸಂಕುಲವು ಪ್ರತಿ ವರ್ಷದಂತೆ ಪ್ರಸಕ್ತ ಶ್ರಾವಣ ಮಾಸದಲ್ಲಿ ನಿತ್ಯವು ನೂರೊಂದು ವಚನಗಳನ್ನು ಓದಿ ಧನ್ಯರಾಗಬೇಕೆಂದು ಕೋರಿದ್ದಾರೆ.