
ಜೇವರ್ಗಿ :ಆ.22:ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯಾಗಿ ಆಚರಣೆ ಮಾಡಲಾಯಿತು.
ಕಲ್ಲು ನಾಗರಿಗೆ ಹಾಲು ಎರಿಯುವ ಬದಲು ಸರ್ಕಾರಿ ಆಸ್ಪತ್ರೆ ಜೇವರ್ಗಿ ಇಲ್ಲಿ ನೀಲಮ್ಮನ ಬಳಗದ ಎಲ್ಲಾ ಶರಣೀಯರು ಹಾಗೂ ಶರಣರು ಅಲ್ಲಿರುವಂತಹ ರೋಗಿಗಳಿಗೆ ಹಾಗೂ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಹಾಗೂ ವೃದ್ಧರಿಗೆ ಹಾಗೂ ಜನಸಾಮಾನ್ಯರಿಗೆ ಎಲ್ಲರಿಗೂ ಕೂಡ ಹಾಲು ಹಂಚಿ ಕುಡಿಸುವುದರ ಮುಖಾಂತರ ಅರ್ಥಪೂರ್ಣವಾಗಿ ಬಸವ ತತ್ವ ನಿಜಾಚರಣೆಯ ಪ್ರಕಾರ ನಾಗರ ಪಂಚಮಿಯ ಬದಲು ಬಸವ ಪಂಚಮಿ ಎಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಡಾಕ್ಟರ್ ಬ್ರಹ್ಮಾನಂದ ಹಾಗೂ ಡಾಕ್ಟರ್ ಸತೀಶ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷರು ನೀಲಕಂಠ ಅವಟಿ ಇವರು ಮುಖ್ಯ ಅತಿಥಿಗಳ ಸ್ಥಾನ ವಹಿಸಿದ್ದರು. ವಚನ ಪ್ರಾರ್ಥನೆಯನ್ನು ಶ್ರೀಮತಿ ಸುಧಾ ಬೆಣ್ಣೂರು ಹಾಗೂ ನಿರ್ಮಲಾ ಪಲ್ಯದ ನಡೆಸಿಕೊಟ್ಟರು. ಹಾಗೆಯೇ ವಿಶ್ವನಾಥ್ ರಾಜಹಳ್ಳಿ ರೆಡ್ಡಿ ಹಾಗೂ ಮಲ್ಲನಗೌಡ ಕನ್ಯಕೋಳೂರು ಶಿವಲಿಂಗ ಗೌಡ ಹಂಗರಗಿ ಹಾಗೂ ಮತ್ತಿತರರು ಶರಣರು ಇದ್ದರು ಹಾಗೆ ಶರಣೀಯರಾದ ನೀಲಮ್ಮನ ಬಳಗದ ಗೌರವಾಧ್ಯಕ್ಷರು ಲಕ್ಷ್ಮೀಬಾಯಿ ಗೌಡ್ತಿ ನೀಲಮ್ಮನ ಬಳಗದ ತಾಲೂಕ ಅಧ್ಯಕ್ಷರು ಮಹಾನಂದ ಹುಗ್ಗಿ ಸುವರ್ಣ ಪಾಟೀಲ್ ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರು. ಗೀತಾ ರಾಜಳ್ಳಿ ಕವಿತಾ ಹರವಾಳ ಲಕ್ಷಿ ಹರವಾಳ ಈರಮ್ಮ ಕೋಬಾಳ ಮತ್ತಿತರರು ಭಾಗವಹಿಸಿದ್ದರು. ಶರಣೆ ಸುಧಾ ಭಗವಂತರಾಯ ಬೆಣ್ಣೂರ ನಿರೂಪಿಸಿದರು. ಶರಣೆ ಗೀತಾ ರಾಜಳ್ಳಿ ವಂದಿಸಿದರು.