ಬಸವ ನರ್ಸಿಂಗ್ ಕಾಲೇಜು : ಉಚಿತ ಆರೋಗ್ಯ ತಪಾಸಣೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಡಿ.೨೩- ನಗರದ ಕಾರುಣ್ಯ ವೃದ್ದ ಹಾಗೂ ಬುದ್ದಿ ಮಾಂದ್ಯಾಶ್ರಮದಲ್ಲಿರುವ ಅಂಧ – ಅನಾಥ, ಬುದ್ಧಿಮಾಂದ್ಯತೆಯುಳ್ಳವರಿಗೆ ಬಸವ ನರ್ಸಿಂಗ್ ಕಾಲೆಜೀನ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಣೆ ಮಾಡಿದರು.
ದಿ.ರಾಮಣ್ಣ ಕಬ್ಬೇರ ಆಳವಂಡಿ ಹತ್ತನೇ ಪುಣ್ಯ ಸ್ಮರಣೆ, ದೊಡ್ಡ ಬಸಪ್ಪ ಮಾಸ್ತರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಬಸವ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿರುವ, ‘ದಿ. ಪ್ರೈಡ್ ಆಫ್ ಕರ್ನಾಟಕ’ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಡಾ.ಹಾಲೇಶ ಆಳವಂಡಿ ಒಳಗೊಂಡು ಹಲವಾರು ವೈದ್ಯರು, ವಿದ್ಯಾರ್ಥಿಗಳು ಆಶ್ರಮದಲ್ಲಿ ಮಾಸ್ಕ್ ವಿತರಿಸಿ ಬಿ.ಪಿ, ಶುಗರ್ ಸೇರಿದಂತೆ ಇನ್ನಿತರ ಆರೋಗ್ಯ ತಪಾಸಣೆಗೈದರು.
ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯ ಸ್ವಾಮಿ, ಡಾ.ಯಮನಪ್ಪ ಒಂಟಿಗೆರಿ, ಶ್ರೀನಿವಾಸ, ನಾಗರಾಜ ಒಂಟಿಗೆರಿ, ಮೇಲ್ವಿಚರಕರಾದ ಸುಜಾತ ಹಿರೇಮಠ ,ವ್ಯವಸ್ಥಾಪಕರಾದ ಗೀತಾ ಕುಲಕರ್ಣಿ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.