
ಬುರಗಿ,ಆ.19- ಮಹಾನಗರದ ವಾರ್ಡ ನಂ.39ರಲ್ಲಿ ಬರುವ ಬಸವ ನಗರಕ್ಕೆ ಕುಡಿಯುವ ನೀರು, ರಸ್ತೆ ದುರಸ್ತಿ, ವಿದ್ಯುತ ದೀಪ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕ ಅಲ್ಲಮ ಪ್ರಭು ಪಾಟೀಲ ಅವರಿಗೆ ಆರ್‍ಪಿಐ (ಅಠವಾಲೆ) ಪಕ್ಷದ ಮುಖಂಡ ಎ.ಬಿ.ಹೊಸಮನಿ ಅವರು ಮನವಿ ಸಲ್ಲಿಸಿದ್ದಾರೆ.
ಈ ಬಡಾವಣೆಯಲ್ಲಿ ಬರುವ ಕೀರ್ತಿ ಶಾಲೆ ಎದುರಿನ 22 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಲ್ಲಿ ಬೋರವೆಲ್ ಹಾಕಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತಿ ಮಾವಿನ, ಅನಿತಾ ಶ್ರೀಮಂತ, ಅರ್ಚನಾ ಎಸ್. ಜಯಶ್ರಿ ಎ, ಶೃತಿ ಡಿ, ಶಾಂತಬಾಯಿ ಎಸ್, ಶ್ರೀದೇವಿ ಸಂಜುಕುಮಾರ ಸೇರಿದಂತೆ ಹಲವರಿದ್ದರು.