ಬಸವ ಧರ್ಮವು ವಿಶಿಷ್ಟವಾದ ಧರ್ಮವಾಗಿದೆ: ಶಂಕರಗೌಡ ಬಿರಾದಾರ

ಬಸವನಬಾಗೇವಾಡಿ:ಆ.10: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಬಸವ ಧರ್ಮವು ವರ್ಗರಹಿತ ಧರ್ಮಸಹಿತ ಜಾತಿ ಮತ ಪಂಥಗಳ ಭೇದವಿಲ್ಲದ ಒಂದು ವಿಶಿಷ್ಟ ಧರ್ಮವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಹೇಳಿದರು
ಬಸವಕಲ್ಯಾಣದಿಂದ ಬೆಳಗಾವಿಗೆ ಹೊರಟಿದ್ದ ಬಸವ ಜ್ಯೋತಿಯನ್ನು ಬಸವೇಶ್ವರ ದೇವಾಲಯದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಮಾತನಾಡಿದ ಅವರು ಬಸವ ಧರ್ಮವು ಬಸವಣ್ಣನವರ ಸಂದೇಶ, ಆದೇಶಗಳ ಆಧಾರದ ಮೇಲೆ ನಿಂತಿರುತ್ತದೆ ವಚನ ಸಾಹಿತ್ಯದ ತಳಹದಿಯ ಮೇಲೆ ನೀರೂಪಿತವಾದುದರಿಂದ ಇದು ವಚನ ಧರ್ಮ ಶರಣರಿಂದ ಪೆÇೀಷಿತವಾದುದರಿಂದ ಈ ಧರ್ಮಕ್ಕೆ ಶರಣ ಧರ್ಮ ಅಂತ ಹೆಸರು ಬಂದಿದೆ ಬಸವಣ್ಣನವರು ಬಸವನಬಾಗೇವಾಡಿಯಲ್ಲಿ ಜನಿಸಿ ಭಕ್ತಿ ಭಂಡಾರಿಯಾಗಿ ಬಿಜ್ಜಳ ರಾಜನ ಸಂಸ್ಥಾನದಲ್ಲಿ ಪ್ರಧಾನಿಯಾಗಿ ಸಾಮಾಜಿಕ ಆರ್ಥಿಕ ಸುಧಾರಣೆಗಾಗಿ ಕಾಯಕ ನಿರ್ವಹಿಸಿದರು ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಧರ್ಮ ಪ್ರಚಾರವನ್ನು ಮಾಡಿದ ಮಹಾನ್ ದಾರ್ಶನಿಕ ಬಸವಣ್ಣನವರು ಜ್ಯೋತಿಯಾತ್ರೆಯ ನೇತೃತ್ವವನ್ನು ಪ್ರಭುಲಿಂಗ ಸ್ವಾಮಿಗಳು ನಾಡಿನಾದಂತ ಸಂಚರಿಸಿ ಬಸವ ತತ್ವ ವಚನ ಸಾಹಿತ್ಯ ಬಸವ ಧರ್ಮದ ಪ್ರಚಾರವನ್ನು ಕಳೆದ 20 ವರ್ಷಗಳಿಂದ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು
ಬೆಳಗಾವಿಯ ವಿಶ್ವಗುರು ಬಸವ ಮಂಟಪದ ಪರಮಪೂಜ್ಯ ಶ್ರೀ ಸದ್ಗುರು ಬಸವಲಿಂಗ ಸ್ವಾಮೀಜಿ ಮಾತನಾಡಿ ಪವಿತ್ರ ಶ್ರಾವಣ ಮಾಸದಲ್ಲಿ ಬಸವಣ್ಣನವರ ಐಕ್ಯವಾದಂತಹ ದಿನವನ್ನು ಬಸವ ಪಂಚಮಿಯನ್ನು ಪ್ರತಿಯೊಬ್ಬ ಶರಣರು ಆಚರಿಸಬೇಕೆಂದು ಹೇಳಿದರು
ಬಸವೇಶ್ವರ ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಹಾಂತೇಶ್ ಆದಿಗೊಂಡ್ ಶ್ರೀಕಾಂತ್ ಕೊಟ್ರಶೆಟ್ಟಿ ಬೆಳಗಾವಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಅಶೋಕ ಬೆಂಡಿಗೇರಿ ಮಾತನಾಡಿದರು ಈ ಸಂದರ್ಭದಲ್ಲಿ ವಿನುತ್ ಕಲ್ಲೂರ್ ದಯಾನಂದ್ ಜಾಲಗೇರಿ ಶ್ರೀಧರ್ ಕುಂಬಾರ್ ಶಿವಾನಂದ್ ತೋಳನೂರ ಸುಭಾಷ್ ಚಕ್ರಮುನಿ ಶಿವಾನಂದ್ ಮಠಪತಿ ಡಾ: ಮಲ್ಲಿಕಾರ್ಜುನ ಹಳ್ಳಿ ಲಕ್ಷ್ಮಣ ಚೌಗುಲೆ ಸುನಿಲ್ ಬೇದರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು