ಬಸವ ದಳ ಜಿಲ್ಲಾ ಯುವ ಘಟಕಕ್ಕೆ ನೇಮಕ

ಬೀದರ್: ಅ.19:ರಾಷ್ಟ್ರೀಯ ಬಸವ ದಳದ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರದ ಶಿವಾ ಇಂಟರನ್ಯಾಷನಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳು: ವೀರಶೆಟ್ಟಿ ಪಾಟೀಲ ಮರಕಲ್ (ಗೌರವಾಧ್ಯಕ್ಷ), ಗಣೇಶ ಬಿರಾದಾರ (ಅಧ್ಯಕ್ಷ), ಸಂಜು ಚೊಂಡಿ (ಉಪಾಧ್ಯಕ್ಷ), ಓಂಕಾರ ಪಸರ್ಗೆ (ಪ್ರಧಾನ ಕಾರ್ಯದರ್ಶಿ), ಆನಂದ ಪಾಟೀಲ (ಸಹ ಕಾರ್ಯದರ್ಶಿ), ನಂದಕುಮಾರ ಪಾಟೀಲ (ಸಂಘಟನಾ ಕಾರ್ಯದರ್ಶಿ), ವಿಶ್ವನಾಥ ಉದಗಿರೆ, ರಾಜಕುಮಾರ ಪಾಟೀಲ, ವಿಶಾಲ ಪಾಟೀಲ, ಚಂದ್ರಕಾಂತ ಜ್ಯೋತೆಪ್ಪನೋರ್, ಅರವಿಂದ ಧುಮ್ಮನಸೂರೆ, ಬಸವ ಪಾಟೀಲ, ವೀರೇಶ ಪಾಟೀಲ, ಶಿವಕುಮಾರ ಜೀರ್ಗೆ, ಬಸವರಾಜ ಚೆನ್ನಶೆಟ್ಟಿ, ಸತೀಶ ಪಾಟೀಲ, ಸಂಜುಕುಮಾರ ಶೀಲವಂತ, ಜಗನ್ನಾಥ ಸ್ವಾಮಿ, ವೀರೇಶ ನಾಗಶಂಕರ್, ಆದರ್ಶ ಪಾಟೀಲ, ಸಂದೀಪ್ ತಡಗೂರೆ, ಪ್ರವೀಣ್ ಪಡೋದಿ, ಸಂಗನಬಸವ ಕಾರಬಾರಿ, ಮಹೇಶ ತಳಘಟ (ಕಾರ್ಯಕಾರಿಣಿ ಸದಸ್ಯರು).
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಹಾಗೂ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಸಭೆಯ ನೇತೃತ್ವ ವಹಿಸಿದ್ದರು.
ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಸುರೇಶ ಸ್ವಾಮಿ, ಸಂಜು ಪಾಟೀಲ, ರವಿ ಪಾಪಡೆ ಮೊದಲಾದವರು ಪಾಲ್ಗೊಂಡಿದ್ದರು.