ಬೀದರ:ಜೂ.9:ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್, ಲಿಂಗಾಯತ ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರು ಸಂಘ ಮತ್ತು ಲಿಂಗಾಯತ ಸೇವಾದಳ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸ್ವಾಮಿಸಮರ್ಥ ಕಲ್ಯಾಣ ಮಂಟಪದಲ್ಲಿ ಜರುಗಿದ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಬಸವ ಸೇವಾ ಪ್ರತಿಷ್ಠಾನ ಕಲಬುರ್ಗಿಯ ಅಧ್ಯಕ್ಷರಾದ ರಾಜಶೇಖರ ಯಂಕಂಚಿಯವರು ಬಸವ ದರ್ಶನ ಗ್ರಂಥವನ್ನು ಬಿಡುಗಡೆ ಮಾಡಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಕುಮಾರ ಪಾಟೀಲರು ಮಾತನಾಡಿ ರಮೇಶ ಸ್ವಾಮಿ ಕನಕಟ್ಟಾ ಅವರ ಹಸ್ತದಲ್ಲಿ ಮೂಡಿಬಂದ ಬಸವ ದರ್ಶನ ಗ್ರಂಥವು ಬಸವಣ್ಣನವರ ಸಂಪೂರ್ಣ ಚರಿತ್ರೆಯು ಹೃದಯಂಗಮವಾಗಿ ಮೂಡಿಬಂದಿದೆ ಎಂದು ಬಣ್ಣಿಸಿದರು.
ಸಾನಿಧ್ಯವಹಿಸಿದ್ದ ಡಾ|| ಅಕ್ಕಅನ್ನಪೂರ್ಣತಾಯಿಯವರು ಬಸವ ದರ್ಶನವು ಅತ್ಯಂತ ಜನಪ್ರಿಯವಾಗಿ ಓದುಗರ ಗಮನ ಸೆಳೆದಿದೆ. ಬೇಗನೆ ಐದುಸಾವಿರ ಪ್ರತಿಗಳು ಖರ್ಚಾಗಿದ್ದು, ಇಂದು ಐದನೇ ಮುದ್ರಣ ಪ್ರಕಟವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಸವ ಭಕ್ತರ ಅನೇಕ ಮನೆಗಳಲ್ಲಿ ಭಕ್ತಿಯಿಂದ ಈ ಗ್ರಂಥವನ್ನು ಪಾರಾಯಣ ಮಾಡಲಾಗುತ್ತಿದೆ. ಈ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಅನೇಕರು ಪ್ರವಚನ ಮಾಡುತ್ತಿರುವುದು ಗ್ರಂಥದ ವಿಶೇಷತೆಯನ್ನು ಸಾರುತ್ತದೆ. ಪುಸ್ತಕವು ಒಂದು ಸಲ ಕೈಯಲ್ಲಿ ಹಿಡಿದರೆ ಸಾಕು ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಭಾಷೆ ಸುಲಲಿತವಾಗಿ ಮೂಡಿಬಂದಿದೆ ಎಂದು ಶ್ಲಾಘೀಸಿದರು.
ಮುಖ್ಯಅತಿಥಿಗಳಾಗಿ ಸುರೇಖಾ ಮುನ್ನೋಳ್ಳಿ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೀದರ ಮತ್ತು ಸುರೇಶ ಚನ್ನಶೆಟ್ಟಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೀದರ ಮತ್ತು ಹುಮನಾಬಾದಿನ ಡಾ|| ಎಸ್.ಆರ್. ಮಠಪತಿಯವರು ಮಾತನಾಡಿದರು. ಪ್ರಭುದೇವರು ನೇತ್ರತ್ವವಹಿಸಿದ್ದರು. ನಿವೃತ್ತ ಅಧಿಕ್ಷಕರು ಅಭಿಯಂತರರಾದ ಮೋಹನರಾವ ಬಿರಾದಾರ, ಚಿತ್ತಾಪೂರನ ಕ್ಷೇತ್ರಾಭಿವೃದ್ಧಿ ಶಿಕ್ಷಣಾಧಿಕಾರಿಗಳಾದ ರುದನೂರ ಸಿದ್ದವೀರಯ್ಯ ಮತ್ತು ಜಿಪಂ, ಮುಖ್ಯಯೋಜನಾಧಿಕಾರಿ ಶರಣಬಸವ ಮಠಪತಿ ಇದ್ದರು. ಚಂದ್ರಶೇಖರ ಹೆಬ್ಬಾಳೆ ಅಧ್ಯಕ್ಷತೆವಹಿಸಿದ್ದರು. ರಾಜಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಲಿಂಗಾಯತ ಸೇವಾದಳದ ಅಭಿಶೇಕ ಮಠಪತಿ ವಂದಿಸಿದರು. ಬಸವರಾಜ ಮಠಪತಿ ನಿರೂಪಿಸಿದರು. ಅಶ್ವಿನಿ ರಾಜಕುಮಾರ ಅವರ ವಚನ ಗಾಯನ ಗಮನ ಸೆಳೆಯಿತು. ಕದಳಿಶ್ರೀ ವಚನ ನೃತ್ಯ ಗೈದಳು.
ಗ್ರಂಥಗಳಿಂದ ತುಲಾಭಾರ:- ಇದೇ ಸಂದರ್ಭದಲ್ಲಿ ಗ್ರಂಥದ ಲೇಖಕರಾದ ಶ್ರೀ ರಮೇಶ ಸ್ವಾಮಿ ಕನಕಟ್ಟಾ ಅವರಿಗೆ ಅಭಿನಂದಿಸಿ, ಕನ್ನಡ ಸಾಹಿತ್ಯ ಲೋಕದ ಉತ್ಕøಷ್ಟ ಗ್ರಂಥಗಳಿಂದ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು.