ಬಸವ ದರ್ಮ ವಿಶ್ವವ್ಯಾಪಿಯಾದುದು: ಎಂ.ಬಿ.ಪಾಟೀಲ್

ಸಂಜೆವಾಣಿ ನ್ಯೂಸ್
ಮೈಸೂರು: ಜೂ.10:- ಕಲ್ಯಾಣದಲ್ಲಿ ಕ್ರಾಂತಿಯಾಗದೇ ಇದ್ದಿದ್ದರೆ ಪ್ರಸ್ತುತ ಬಸವ ಧರ್ಮ, ಬಸವ ತತ್ವವೂ ವಿಶ್ವವ್ಯಾಪಿಯಾಗಿರುತ್ತಿತ್ತು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಬಸವಬಳಗಗಳ ಒಕ್ಕೂಟದ ವತಿಯಿಂದ ಭಾನುವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕಗಳನ್ನು ಮಾಡುತ್ತಿದ್ದ ಸಣ್ಣ-ಸಣ್ಣ ಸಮುದಾಯಗಳನ್ನು ಒಂದುಗೂಡಿಸಿ,ಅವರೆಲ್ಲರೂ ವೈಚಾರಿಕತೆಯನ್ನು ಬೆಳೆಸಿ ಸಮಾ ಸಮಾಜ ನಿರ್ಮಾಣದ ಸುಂದರ ಕನಸನ್ನು ಕಂಡಿದ್ದ ಬಸವಣ್ಣನವರ ಆಶಯ ಕಲ್ಯಾ?ಣ ಕ್ರಾ?ಂತಿಯಿಂದಾಗಿ ನನಸಾಗದೇ ಹೋದದ್ದು ನಮ್ಮ ದೌರ್ಭಾಗ್ಯ. ಇಲ್ಲದಿದ್ದರೆ ನಮ್ಮ ದೇಶ ಬಸವ ಭಾರತವಾಗುತ್ತಿತ್ತು. 12ನೇ ಶತಮಾನದಲ್ಲೇ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ, ಸಾಮಾಜಿಕ ಅನಿಷ್ಠಗಳ ವಿರುದ್ಧ, ಮೌಡ್ಯಗಳ ವಿರುದ್ಧ , ಜಾತಿ ವ್ಯವಸ್ಥೆಯ ವಿರುದ್ಧ ಚಳವಳಿಯನ್ನು ಹುಟ್ಟುಹಾಕಿದ ಬಸವಣ್ಣ, ಮಹಿಳೆಯರಿಗೆ ಸಮಾನತೆ ಹಾಗೂ ಶಿಕ್ಷಣ ಅವಶ್ಯವಾಗಿ ಬೇಕು ಎಂದು ಪ್ರತಿಪಾದಿಸಿದ್ದರು. ಆಡು ಭಾಷೆಯಲ್ಲಿ ವಚನಗಳನ್ನು ಬರೆದು ಚಳವಳಿಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾದರು. ಅಂದು ಸ್ಥಾಪನೆಯಾದ ಅನುಭವ ಮಂಟಪವೇ ನಮ್ಮ ಸಂಸತ್ತು ರೂಪುಗೊಳ್ಳಲು ಪ್ರೇರಣೆಯಾಗಿದೆ ಎಂದರು.
ವೀರಶೈವ-ಲಿಂಗಾಯತ ಸಮುದಾಯದ ಉಪ ಪಂಗಡಗಳು ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳವಣಿಗೆಯಾಗಲು ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ. ನಾವೆಲ್ಲರೂ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿದ ಬಗ್ಗೆ? ಮಾತನಾಡುತ್ತೇವೆ. ಆದರೆ ನಮ್ಮ ಒಳ ಪಂಗಡಗಳಲ್ಲಿ ವಿವಾಹ ಮಾಡಿಕೊಳ್ಳಲು ಒಪ್ಪುದಿಲ್ಲ. ಒಬ್ಬರನ್ನು ನೋಡಿದರೆ ಒಬ್ಬರು ಅಗೌರವ ತೋರುತ್ತಾ?ರೆ. ಈ ಧೋರಣೆಯನ್ನು ಬಿಟ್ಟು ಎಲ್ಲರೂ ಒಂದಾಗಬೇಕು. ಅಲ್ಲದೇ ಸಮುದಾಯದಲ್ಲಿ ಉತ್ತರ-ದಕ್ಷಿಣ ಎಂಬದು ಇದೆ. ಈ ಭಾವನೆಯನ್ನು ಹೋಗಲಾಡಿಸಲು ಎರಡೂ ಭಾಗದವರ ಕೂಡುವಿಕೆ ಆಗಬೇಕು. ಬಸವಾದಿ ಶರಣರ ಸಿದ್ಧಾಂತದಲ್ಲಿ ನಮ್ಮ ಸಮಾಜವನ್ನು ಸಂಘಟನೆ ಮಾಡಿಕೊಳ್ಳಬೇಕು. ಇತರೆ ಧರ್ಮದವರನ್ನೂ ಗೌರವಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಜಾತಿಯ ಶ್ರೇಷ್ಠತೆ ಅಳಿಯದೇ ಜಾತಿ ವಿನಾಶ ಆಗುವುದಿಲ್ಲ. ಜಾತಿ ನಾಶವಾಗದೇ ಮಾನವೀಯತೆ ಬರುವುದಿಲ್ಲ. ಸಮುದಾಯಗಳ ನಡವಳಿಕೆಗಳಿಗೆ ಮನುಷ್ಯರ ಮನಸ್ಸು ಕಾರಣ. ಈ ಹಿನ್ನೆಲೆಯಲ್ಲಿ 12ನೇ ಶತಮಾನದಲ್ಲೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿದ್ದ ಬಸವಣ್ಣ ಮಹಾನ್ ಸಾಂಸ್ಕೃತಿಕ ನಾಯಕ. ಅವರ ವಿಚಾರಧಾರೆಗಳನ್ನು ಸ್ಮರಣೆ ಮಾಡುವುದು ಹೆಮ್ಮೆಯ ಸಂಗತಿ ಎಂದರು.
ಬಸವ ಜಯಂತಿ ಎಂದರೆ ಜಾತಿ ವಿನಾಶದ, ಮಾನವ ಹಕ್ಕುಗಳ ಸಂರಕ್ಷಣೆಯ,ಮೂಢನಂಬಿಕೆ, ಸನಾತನವಾದ, ಶೋಷಣೆಯ ವಿರುದ್ಧದ ಹೋರಾಟದ ವೈಜ್ಣಾನಿಕ -ವೈಚಾರಿಕ ಜಯಂತಿ ಎಂದು ಅರ್ಥ. ಜಾತಿ ಶ್ರೇಷ್ಠತೆಯನ್ನು ಒಡೆದು ಹಾಕಲು ಬಸವಣ್ಣ ನಾನು ಮಾದರ ಚನ್ನಯ್ಯನ ಮಗ ಎಂದು ಹೇಳಿಕೊಂಡಿದ್ದಾ?ರೆ. ಆದ್ದರಿಂದ ಬಸವಣ್ಣ ಜೀವಂತಿಕೆಯಾಗಿ ಇರಬೇಕಾದರೇ ಪ್ರತಿಯೊಬ್ಬ ಭಾರತೀಯನ್ನು ಬಸವಣ್ಣನ ಅನುಯಾಯಿಯಾಗಬೇಕು ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾ?ಮೀಜಿ ಸಾನ್ನಿಧ್ಯವಹಿಸಿದ್ದರು. ಬಸವಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್, ಸಚಿವ ಕೆ.ವೆಂಕಟೇಶ್, ಕೆಯುಡಬ್ಲೂಎಸ್‍ಎಸ್‍ಬಿ ಅಧ್ಯಕ್ಷ ವಿನಯ ಕುಲಕರ್ಣಿ, ಶಾಸಕರಾದ ಗಣೇಶ್ ಪ್ರಸಾದ್, ಡಾ.ಡಿ.ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕಾಡಾ ಅಧ್ಯಕ್ಷ ಮರಿಸ್ವಾ?ಮಿ, ಚಲನ ಚಿತ್ರ ನಟ ಎನ್.ಎಸ್.ನಾಗಭೂಷಣ್, ಮೈಸೂರು ಜಿಲ್ಲೆಯ ಹಲವಾರು ಮಠಾಧೀಶರು, ಬಸವಬಳಗಗಳ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಆಕರ್ಷಿಸಿದ ಭವ್ಯ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಮೈಸೂರಿನ ಜೆಎಸ್‍ಎಸ್ ಮಹಾವಿದ್ಯಾ?ಪೀಠದ ಮುಂಭಾಗದಲ್ಲಿ ಇರುವ ಬಸವೇಶ್ವರ ಮಂಟಪದ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
108 ಕಳಸ ಹೊತ್ತ ಮಹಿಳೆಯರು, ಶಾಲಾ ಮಕ್ಕಳಿಂದ ಹಾಗೂ ಮಹಿಳೆಯರಿಂದ ವಚನ ಗಾಯನ ನಡಿಗೆ, ನಂದಿ ಧ್ವಜ ಕುಣಿತ, ವೀರಗಾಸೆ, ಮರಗಾಲು ಕುಣಿತ, ಕೀಲು ಕುದುರೆ ಕುಣಿತ, ಗಾಡಿಗೊಂಬೆ, ಹುಲಿ ವೇಷ, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ್ಟದ ಕುಣಿತ, ಗೊರವರ ಕುಣಿತಗಳು ನೆರೆದಿದ್ದ ಸಹಸ್ರಾರು ಜನರನ್ನು ಆಕರ್ಷಿಸಿದವು. ಬೆಳ್ಳಿ ರಥದಲ್ಲಿ ಅಕ್ಕಮಹಾದೇವಿ, ಅಲ್ಲಮ ಪ್ರಭು, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮುಂತಾದವರ ವೇಷ ಧರಿಸಿದ್ದ ಮಕ್ಕಳು ಮೆರವಣಿಗೆಗೆ ಮೆರಗು ನೀಡಿದವು. ಅಶ್ವರೂಢರಾಗಿದ್ದ ಬಾಲ ಬಸವಣ್ಣರು ರಸ್ತೆ?ಯುದ್ದಕ್ಕೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.ಅನುಭವ ಮಂಟಪ, ಸಿದ್ಧಗಂಗಾ ಶ್ರೀ, ಸಿದ್ದೇಶ್ವರ ಸ್ವಾ?ಮೀಜಿ, ದೇವನೂರು ಮಠದ ಗುರುಮಲ್ಲೇಶ್ವರರು, ಸುತ್ತೂರು ಮಠದ ಪರಂಪರೆ, ಅಖಿಲಭಾರತ ವೀರಶೈವ ಮಹಾಸಭಾ ನಡೆದು ಬಂದ ದಾರಿಯನ್ನು ತಿಳಿಸುವ ಸ್ತಬ್ಧ ಚಿತ್ರಗಳು ಮರೆವಣಿಗೆಯಲ್ಲಿ ಸಾಗಿದವು.ಮೆರವಣಿಗೆ ಯುವ ಸಮಿತಿಯು ಆಯೋಜಿಸಿದ್ದ ಡಿಜೆ ಮೇಳದ ಸದ್ದಿಗೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ನೊಣವಿನಕೆರೆಯ ಮಠದ ಆನೆಯ ಮೇಲೆ ಅಂಬಾರಿಯಲ್ಲಿ ಬಸವಣ್ಣನ ಪ್ರತಿಮೆಯನ್ನು ಇಟ್ಟು ಮೆರವಣಿಗೆಯಲ್ಲಿ ಮಾಡಲಾಯಿತು.
ಮೆರವಣಿಗೆ ಅಂಗವಾಗಿ ಮೊದಲಿಗೆ ದೇವನೂರು ಮಠದ ಮಹಾಂತ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆರವಣಿಗೆ ಉದ್ಘಾ?ಟಿಸಿದರು. ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾ?ಮೀಜಿ, ಹೊಸಮಠದ ಚಿದಾನಂದ ಸ್ವಾ?ಮೀಜಿ, ಕುದೇರು ಮಠದ ಗುರುಶಾಂತಸ್ವಾ?ಮೀಜಿ, ಕುಂದೂರು ಮಠದ ಶರತ್‍ಚಂದ್ರ ಸ್ವಾ?ಮೀಜಿ ಹಾಜರಿದ್ದರು.