ಬಸವ ತೀರ್ಥ ವಿದ್ಯಾ ಪೀಠ ಶಾಲೆಗೆ ಶಾಸಕ ಸಿದ್ದು ಪಾಟೀಲ ಭೇಟಿ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಆ.2: ಶಾಸಕ ಸಿದ್ದು ಪಾಟೀಲರವರು ಹಳ್ಳಿಖೇಡ (ಬಿ) ಪಟ್ಟಣಕ್ಕೆ ಬೇಟಿ ನೀಡಿದ ವೇಳೆ ಪಟ್ಟಣದ ಬಸವ ತೀರ್ಥ ವಿದ್ಯಾ ಪೀಠ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದರು. ಶಾಲೆಯ ಆಢಳಿತ ಮಂಡಳಿಯಿದ ಅಭಿನಂದನಾ ಸಮಾರಂಭ ಸ್ವೀಕರಿಸಿ, ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ ಮಕ್ಕಳು ಉನ್ನತ ಮಟ್ಟ ಹುದ್ದೆಗೆ ಹೋಗಿ ತಮ್ಮ ತಂದೆ ತಾಯಿಯ ಹೆಸರನ್ನು ಸಮಾಜದಲ್ಲಿ ಎತ್ತರಕ್ಕೆ ತರಲಿ ಎಂದು ವಿಧ್ಯಾರ್ಥಿಗಳಿಗೆ ಸಿದ್ದು ಪಾಟೀಲ ಕಿವಿ ಮಾತು ಹೇಳಿದರು.
ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗುಂಡಯ್ಯಾ ತೀರ್ಥ, ಕಾರ್ಯದರ್ಶಿಯಾದ ಶಿವಕುಮಾರ ತೀರ್ಥ, ಓಂಪ್ರಕಾಶ ಪ್ರಭಾ, ನಾಗರಾಜ ಚಂದನಕೇರಾ, ಲಿಂಗಾನಂದ ತಿಬಶೆಟ್ಟಿ, ರಾಜು ಮಾಲಿ ಪಾಟೀಲ, ಶಾಲೆಯ ಶಿಕ್ಷಕ ವೃಂಧದವರು ಉಪಸ್ಥಿತರಿದ್ದರು.