ಬಸವ ತೀರ್ಥ ವಿದ್ಯಾಪೀಠದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹುಮನಾಬಾದ :ಆ.15:ತಾಲೂಕಿನ ಹಳ್ಳಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಸಂಸ್ಥೆಯಲ್ಲಿ ಮಂಗಳವಾರದಂದು ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಮದ ಆಚರಿಸಲಾಯಿತು.
ಈ ಕಾರ್ಯಕ್ರಮದ ಘನಧ್ಯಕ್ಷ್ಚತೆ ವಹಿಸಿಕೊಂಡು ಮಾತನಾಡಿದ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾದ ಶ್ರಿ ಕೇಶವರಾವ ತಳಘಟಕರ್ ನಮ್ಮ ಶಾಲೆಯ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ದೇಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ದೇಶಾಭೀಮಾನವನ್ನು ಬೆಳೆಸಬೇಕು ಎಂದು ಕರೆ ನಿಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಹಳ್ಳಿಖೇಡ(ಬಿ) ಪೋಲಿಸ್ ಠಾಣೆಯ ಪಿ.ಎಸ್.ಐ ರವರಾದ

ಶ್ರೀ ಐಯ್ಯಪ್ಪ ಸರ್ ಅವರು ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ದೇಶದ ಬಗ್ಗೆ ಅರ್ಪಣಾ ಮನೋಭಾವ ಹೊಂದಿರಬೇಕು ಮತ್ತು ಈಗಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿನಿಯರು ವಾಟ್ಸಪ್ ಮತ್ತು ಟ್ವಿಟರ್‍ಗಳಲ್ಲಿ ತಮ್ಮ ಭಾವಚಿತ್ರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸೋಮಯ್ಯ ಹೀರೆಮಠ ಅಧ್ಯಕ್ಷರು, ಶ್ರೀ ರಮೇಶ ಮಹೇಂದ್ರಕರ ಕಾರ್ಯದರ್ಶಿಗಳು ಬವತೀರ್ಥ ವಿದ್ಯಾಪೀಠ ಸ್ಥಳಿಯ ಸಮಿತಿ ಹಳ್ಳಿಖೇಡ(ಬಿ), ಶ್ರೀ ಗುಂಡಯ್ಯ ತಿರ್ಥಾ ಆಡಳಿತಾಧಿಕಾರಿಗಳು, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ವೀದ್ಯಾವತಿ ತೀರ್ಥಾ, ಪ್ರೌಢ ಶಾಲಾ ಮುಖ್ಯಗುರುಗಳಾದ ಶ್ರೀ ಚಂದ್ರಕಾಂತ ಬಿರಾದರ, ಹಾಗೂ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಸ್ತಾನ್ ಪಟೆಲ್ ಉಪಸ್ಥಿತರಿದ್ದರು.

ವಚನ ಪ್ರಾರ್ಥನೆ : ಸಾಕ್ಷಿ ಹಾಗೂ ಸಂಗಡಿಗರು 10ನೇ ತರಗತಿಯ ಮಕ್ಕಳಿಂದ

ಸ್ವಾಗತ ಗೀತೆ : ಕುಮಾರಿ ಜಯಶೀಲ ಪಿ.ಯು.ಸಿ ವಿದ್ಯಾರ್ಥಿನಿ

ಸ್ವಾಗತ ಭಾಷಣ: ಶ್ರೀ ಮಸ್ತ್ತಾನ ಪಟೇಲ ಪ್ರಾಚಾರ್ಯರು

ಸಂಚಾಲನೆ : ಶ್ರೀ ಸಂಗಮೆಶ ಪಾಟೀಲ

ವಂದನಾರ್ಪಣೆ ಶ್ರೀ ರೆವಪ್ಪಯ್ಯ ಸ್ವಾಮಿ

ಈ ಕಾರ್ಯಕ್ರಮದಲ್ಲಿ ಶಾಲಾ/ಕಾಲೇಜಿನ ಮಕ್ಕಳಿಂದ ಗ್ರಾಮದಲ್ಲಿ ಪಥಸಂಚಲನ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.