
ಹುಮನಾಬಾದ್ : ಆ.9:ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಫೆÇೀರ್ಜರಿ ಆರೋಪದಡಿ ಪಟ್ಟಣದ ಹೊರವಲಯದ ಕಲ್ಲೂರ ರಸ್ತೆಯಲ್ಲಿರುವ ಬಸವ ತೀರ್ಥ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಭೂಮಿ ವಿವಾದ ಕುರಿತು ಅಪಿಲುದಾರ ಚಂದ್ರಕಾಂತ ಶಾಮರಾವ ಬಿರಾದಾರ ಹಾಗೂ ಬಸವ ತೀರ್ಥ ಮಠದ ಡಾ. ಸಿದ್ದಲಿಂಗಯ್ಯ ಸ್ವಾಮಿ ಮಧ್ಯೆ ಕಳೆದ ಅನೇಕ ವರ್ಷಗಳಿಂದ ವಿವಾದ ನಡೆದಿತ್ತು. ಈ ಕುರಿತು ಬೋರಂಪಳ್ಳಿ ಗ್ರಾಮದ ನಿವಾಸಿ ಚಂದ್ರಕಾಂತ 2017 ನವೆಂಬರ್ 17ರಂದು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಹೋರಾಟ ನಡೆಸಿದದ್ದರು. ಅನೇಕ ವರ್ಷಗಳ ಹೋರಾಟದ ಬಳಿಕ ಕಲಬುರಗಿ ಉಚ್ಚ ನ್ಯಾಯಾಲಯ ಹುಮನಬಾದ್ ಬಸವತೀರ್ಥ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಬೀದರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಭೂ ದಾಖಲೆಗಳ ಖಂಡಿಕೆಗಳನ್ನು ತಿರುಚಿ ಹೊಸ ದಾಖಲೆಗಳನ್ನು ಸೃಷ್ಟಿಸಿ ಪೆÇೀರ್ಜರಿ ಮಾಡಿರುವುದನ್ನು ನ್ಯಾಯಾಲಯದ ಗಮನ ಸೇಳಿದಿದ್ದು, ಇದೀಗ ಸೂಕ್ತ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಗೋವಿಂದರಡ್ಡಿ ನ್ಯಾಯಾಲಯದ ಆದೇಶದ ಅನುಸಾರ ಬಸವ ತೀರ್ಥ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಹುಮನಾಬಾದ್ ತಹಶಿಲ್ದಾರಗೆ ಸೂಚನೆ ನೀಡಿದ್ದಾರೆ.