ಬಸವ ತತ್ವ ಪಾಲನೆಯಿಂದ ಸಮೃದ್ಧಿ: ಅಶೋಕ ಖೇಣಿ

ಬೀದರ್:ಎ.24: ವಿಶ್ವಗುರು ಬಸವಣ್ಣನವರ ಕಾಯಕ, ದಾಸೋಹ ತತ್ವ ಪಾಲನೆಯಿಂದ ಸಮಾಜದಲ್ಲಿ ಸಮೃದ್ಧಿ ನೆಲೆಗೊಳ್ಳುವುದು ಎಂದು ಮಾಜಿ ಶಾಸಕ, ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಹೇಳಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಂಜೋಳಖೇಣಿ ಗ್ರಾಮದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವೇಶ್ವರರು ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕಾಯಕದ ಮಹತ್ವವವನ್ನು ಶರಣರು ಮನಗಂಡಿದ್ದರು. ಹಾಗೆಯೇ ದಾಸೋಹದ ಪರಿಕಲ್ಪನೆಯನ್ನೂ ನೀಡಿದ್ದಾರೆ. ಕಾಯಕ ಕೈಗೊಂಡು ಆತ್ಮಗೌರವದಿಂದ ಘನತೆಯುಕ್ತ ಜೀವನ ನಡೆಸಬೇಕು ಎನ್ನುವುದು ಶರಣರ ತತ್ವಗಳ ಆಶಯವಾಗಿದೆ ಎಂದು ಅಶೋಕ ಖೇಣಿ ಹೇಳಿದರು.
ಪ್ರತಿಯೊಬ್ಬರು ಬಸವಾದಿ ಶರಣರ ತತ್ತ, ಸಂದೇಶ ಪಾಲಿಸಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಬದುಕಿನಿಂದ ಪ್ರೇರಣೆ ಪಡೆದುಕೊಂಡು, ಉತ್ತಮ ದಾರಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು. ಶರಣರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಆಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದರು.
ರಂಜೋಳ ಖೇಣಿ ಗ್ರಾಮದ ಹಿರಿಯರು, ಪ್ರಮುಖರು, ಯುವಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ
ಕೆಪಿಸಿಸಿ ಸಂಯೋಜಕರಾದ ಶರಣು ಪಾಟೀಲ
ಗ್ರಾಮದ ಮುಖಂಡರಾದ ನಂದಕುಮಾರ್ ಪಾಟೀಲ, ವೀರೇಶ ಧನಶ್ರೀ, ರಾಜು ವಡ್ಡಿ, ವೈಜಿನಾಥ ನಾಟಿಕಾರ, ರಾಜಕುಮಾರ ಗಿರಿಮಲ್, ದತ್ತು ಚನಮಲ್, ಮಲ್ಲಿಕಾರ್ಜುನ ಬೊಮ್ಮಾ, ಜಗನಾಥ ಹಜ್ಜರಗಿ, ವಿಜಯಕುಮಾರ ಖೇಣಿ, ವಿಶಾಲ, ಮಹೇಶ, ಸೇರಿ ಅನೇಕರು ಉಪಸ್ಥಿತರಿದ್ದರು.