ಬಸವ ಜ್ಯೋತಿ ಮನೆಯಲ್ಲಿ ಮಹಾಮನೆ ಸಮಾರೋಪ

ಚಿಂಚೋಳಿ,ಮಾ.21- ತಾಲೂಕಿನ ಬುರಗಪಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಆಯೋಜಿಸಿದ್ದ ಬಸವ ಜ್ಯೋತಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜರುಗಿತು.
ಈ ಕಾರ್ಯಕ್ರಮವನ್ನು ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ, ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮತ್ತು ಬಸವ ಷಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಬಸವದಾಳದ ಅಧ್ಯಕ್ಷರಾದ ನಂದಿಕುಮಾರ ಪಾಟೀಲ್, ಅವರು ಮಾತನಾಡಿ ಬುರಗಪಳ್ಳಿ ಗ್ರಾಮದಲ್ಲಿ ಬಸವ ಜ್ಯೋತಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮಕ್ಕೆ ಯಶಸ್ವಿ ಮಾಡಿದ ಎಲ್ಲಾ ಬಸವ ಅಭಿಮಾನಿಗಳಿಗೆ ಧನ್ಯವಾದಗಳು ಹೇಳಿ ಬಸವಣ್ಣನವರ ತತ್ವ ಸಿದ್ಧಾಂತಗಳು ಬಸವಣ್ಣರ ವಚನಗಳನ್ನು ಇಂದಿನ ಮಕ್ಕಳಿಗೆ ನಾವೆಲ್ಲರೂ ತಿಳಿ ಹೇಳಬೇಕಾಗಿದೆ ಯಾಕೆಂದರೆ ಎಲ್ಲಾ ಮಕ್ಕಳು ವಚನ ಬಸವಣ್ಣವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳಿಗೊಳಿಸಿಕೊಳ್ಳಬೇಕಾಗಿದೆ ಮುಂಬರುವ ದಿನದಲ್ಲೂ ಕೂಡ ಈ ಕಾರ್ಯಕ್ರಮವು ಚಿಂಚೋಳಿ ತಾಲೂಕಿನಲ್ಲಿ ವಿವಿಧ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಬಸವ ಅಭಿಮಾನಿಗಳು ಬಸವ ತತ್ವ ಸಿದ್ಧಾಂತಗಳನ್ನು ಇಂತ ಕಾರ್ಯಕ್ರಮಗಳಿಗೆ ಭಾಗವಹಿಸಿ ಬಸವಣ್ಣರ ತತ್ತ ಸಿದ್ದಾಂತಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಗುರುಲಿಂಗಪ್ಪ ಪಾಟೀಲ ಮೋಘಾ, ಸೂರ್ಯಕಾಂತ ಹುಲಿ, ರಾಜಶೇಖರ ಪೆÇಲೀಸ ಪಾಟೀಲ್, ಜಗನ್ನಾಥ ಬಾಸ್ಪಳ್ಳಿ, ಸಂಗಮೇಶ ಮಾಲಿ ಪಾಟೀಲ್, ಬಸವರಾಜ ಕೇರಳಿ, ಹಣಮಂತರಾವ ತಿಪ್ಪ ಕೊರಡಂಪಳ್ಳಿ, ಚನ್ನಪ್ಪ ಮಾಲಿ ಪಾಟೀಲ್ ಅಮ್ರತರಾವ ಆಕಲ್, ಜಗದೀಶ ಹುಲಿ, ಗ್ರಾಂ ಪ ಸದಸ್ಯರಾದ ರೇಣುಕುಮಾರ್ ಹುಲಿ, ಗ್ರಾಂ.ಪಂ. ಸದಸ್ಯರಾದ ಶರಣಪ್ಪ ಭಾಸಪಳ್ಳಿ, ಮಲ್ಲಪ್ಪ ಭಾಸಪಳ್ಳಿ,
ಪ್ರಭಾಕರ ಪಾಂಚಾಳ, ಧರ್ಮರಾಜ ಪಾಂಚಾಳ, ಸಂಗಣ್ಣ ಜಂಬಗಿ, ಗುಂಡಪ್ಪ ಹುಡದಳ್ಳಿ , ತಿಪ್ಪಣ್ಣ ಕುಂಬಾರ, ರೇವಣಕುಮಾರ ಮಾಲಿಪಾಟೀಲ್, ಜಗನ್ನಾಥ ಮುಂಗಾರು, ಸೋಮಶೇಖರ್ ಬಿರಾದಾರ, ಈರಪ್ಪ ಕುಂಬಾರ, ಶಏಖರಯ್ಯ ಸ್ವಾಮಿ, ಬಸವರಾಜ ಮಿಶ್ರ, ದೇವಪ್ಪ ಮಿರಿಯಾಣ, ಮತ್ತು ಅನೇಕ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು