
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.21: ಬಸವ ಜಯಂತಿ ಪ್ರಯುಕ್ತ ಸತತ 14 ವರ್ಷಗಳಿಂದ ಜಗಜ್ಯೋತಿ ಬಸವೇಶ್ವರ ಐಕ್ಯ ಸ್ಥಳ ಕೂಡಲಸಂಗಮದಿಂದ ನಾಡಿನಲ್ಲಿ ಶಾಂತಿ, ನೆಮ್ಮದಿ , ಮಳೆ, ಬೆಳೆ ಚೆನ್ನಾಗಿರಲಿ ಎಂದು ಬಳ್ಳಾರಿ ಜಿಲ್ಲಾ ಕನ್ನಡ ಕ್ರಾಂತಿ ದಳದ ಜಿಲ್ಲಾ ಅಧ್ಯಕ್ಷರು, ವೀರಶೈವ ಕಾಲೇಜು ಅಧ್ಯಕ್ಷರು, ವೀ.ವಿ.ಸಂಘದ ಸಹ ಕಾರ್ಯದರ್ಶಿ, ಹೋರಾಟಗಾರರು ಆದ ದರೂರು ಶಾಂತನಗೌಡರ ನೇತ್ರತ್ವದಲ್ಲಿ ವಿಶ್ವಶಾಂತಿಗಾಗಿ ಕೂಡಲಸಂಗಮ ದಿಂದ ಬಸವ ಜ್ಯೋತಿಯನ್ನು ತರಲಾಗುವುದು. ವಿಶ್ವದ ಮನುಕುಲ ಶಾಂತಿ ನೆಮ್ಮದಿ ಯಿಂದ, ಸ್ನೇಹ, ಪ್ರೀತಿ ಯಿಂದ ಬಾಳಲಿ ಎಂದು ಕೂಡಲಸಂಗಮದಲ್ಲಿ ಪೂಜೆ ನೆರವೇರಿಸಿ ಬಸವ ಜಯಂತಿ ಯಂದು ಬಳ್ಳಾರಿಯಲ್ಲಿರುವ ರಾಷ್ಟ್ರೀಯ ಬಸವ ದಳದಿಂದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿರುವ ಶಾಂತಿಧೂತ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವ ಜ್ಯೋತಿಯನ್ನು ಜಿಲ್ಲಾಡಾಳಿತಕ್ಕೆ ಹಸ್ತಾಂತರಿಸಿಲಾಗುವುದು.
ಈ ಕಾರ್ಯಕ್ರಮದಲ್ಲಿ ಕನ್ನಡ ಕ್ರಾಂತಿದಳ ಸದಸ್ಯರು. ಬಸವಣ್ಣರವರ ಭಕ್ತರು ಭಾಗವಹಿಸಲಿದ್ದಾರೆ ಎಂದು ದರೂರು ಶಾಂತನಗೌಡರು ತಿಳಿಸಿದ್ದಾರೆ. ಗಂಗಾವತಿವೀರೆಶ್, ಕುಂದಾಪುರ ನಾಗರಾಜ, ಕರೇಗೌಡ, ಕೋರಿ ವಿರುಪಾಕ್ಷಪ್ಪ ಹೆಚ್.ಎಂ ಕಿರಣ್ ಕುಮಾರ್ ರೂಪನಗುಡಿ ಬಸವರಾಜ, ಹಲಕುಂದಿ ವಿಜಯಕುಮಾರ್ ರವಿಶಂಕರ್, ವೈ.ಜಂಬನ ಗೌಡ ಸಿಂಗಾಪುರ ನಾಗರಾಜ, ಕರಣಮ ವಿಶ್ವನಾಥ, ಗುರುಮೂರ್ತಿ.ವೀರನಗೌಡ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.