ಬಸವ ಜಯಂತಿ, ಮಾತೃದಿನ: ಮಹಿಳೆಯರಿಗೆ ಸನ್ಮಾನ

ಕಲಬುರಗಿ,ಮೇ.15-ನಗರದ ಮಕ್ತಂಪುರ ಬಡಾವಣೆಯ ಬಸವಾದಿ ಶರಣೆಯರ ಬಳಗ ಹಾಗೂ ಸ್ಪಂದನ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ 891ನೇ ಬಸವ ಜಯಂತಿಯನ್ನು ಆಚರಿಸಲಾಯಿತು. ಬಸವಾದಿ ಶರಣೆಯರ ಬಳಗದ ಅಧ್ಯಕ್ಷೆ ಗಿರಿಜಾ ಶಾಂತಕುಮಾರ್ ಬಿಲಗುಂದಿ ಹಾಗೂ ಉಪಾಧ್ಯಕ್ಷೆ ನಿರ್ಮಲಾ ಶಿವಶಂಕರ್ ಹೊಸಗೌಡ್ರು ಅವರ ನೇತೃತ್ವದಲ್ಲಿ ಬಸವ ಜಯಂತಿಯನ್ನು ಬಸವಣ್ಣನಿಗೆ ತೊಟ್ಟಿಲಲ್ಲಿ ಹಾಕುವ ಮೂಲಕ, ಪ್ರಸಾದ ಸೇವೆ ಭಜನೆ ಕೀರ್ತನೆ ನೃತ್ಯ ಡೊಳ್ಳು ಕುಣಿತ ಕಲೆಗಳ ಪ್ರದರ್ಶನದ ಮೂಲಕ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಸ್ಪಂದನ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಲತಾ ಎಸ್ ಬಿಲಗುಂದಿ, ಉಪಾಧ್ಯಕ್ಷೆ ಸುಮಾ ಎಸ್ ಪಪ್ಪಾ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಬಡಾವಣೆಯ ಬಸವಾದಿ ಶರಣೆಯರ ಬಳಗದ ಅಧ್ಯಕ್ಷ, ಉಪಾಧ್ಯಕ್ಷರಿಗೆ, ಮಹಿಳೆಯರಿಗೆ ಸನ್ಮಾನಿಸಲಾಯಿತು.
Àಮಾತೃದಿನದ ಪ್ರಯುಕ್ತ ಬಡಾವಣೆಯ ಹಿರಿಯರಾದ ಶಕುಂತಲಾ ಬಸವರಾಜ್ ಭೀಮಳ್ಳಿ, ಗುರುಬಾಯಿ ಉಮಾಮಹೇಶ್ವರ ಬಿಲಗುಂದಿ, ಮಹಾದೇವಿ ಮಹದೇವಪ್ಪ ಪಪ್ಪಾ, ಶಾರದಾಬಾಯಿ ವಿಶ್ವನಾಥ ಹಾಲಪ್ಪ, ಸುಭದ್ರಾಬಾಯಿ ದಸ್ತಾಪುರ, ಗುರುಬಾಯಿ ಚಂದ್ರಶೇಖರ್ ಅರಳಿ ಅವರನ್ನು ಸ್ಪಂದನಾ ಮಹಿಳಾ ಸಂಘ ಹಾಗೂ ಬಸವಾದಿ ಶರಣೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಸವ ಜಯಂತಿಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ನಾಗವೇಣಿ ಪಾಟೀಲ ರೇವೂರ್ ಹಾಗೂ ಮಾಲಾ ಧಣ್ಣೂರ್ ಅವರನ್ನು ಗಿರಿಜಾ ಶಾಂಕುಮಾರ್ ಬಿಲಗುಂದಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀದೇವಿ ಪಾಟೀಲ, ರೇಣುಕಾ ನಂದ್ಯಾಳ್, ಕೀರ್ತಿ ರೂಪಾ ಪವಾರ್, ಸುರೇಖಾ ಖುಬಾ, ಶೋಭಾ ದಸ್ತಾಪುರ, ರತ್ನಕಲಾ ನಂದ್ಯಾಳ, ಸವಿತಾ ಉದನೂರ್, ರೇಣುಕಾ ಭರತನೂರ್, ನಿರೂಪಮ ಭರತನೂರ್, ಸಂಗೀತಾ ಪೂರ್ಣಿಮಾ ಚವಾಣ್, ಭಾಬಿಜಿ ಮೀರಾ ಸ್ವಂತ್ ಆಸ್ಪಲ್ಲಿ ಅವಾಜಿ ಜ್ಯೋತಿ ನಿಪ್ಪಾಣಿ ವಿಜಯಲಕ್ಷ್ಮಿ ಶೀಲಾ ಈರಮ್ಮ ರಾಜೇಶ್ವರಿ ರುಕ್ಮಿಣಿ ಉಪಸ್ಥಿತರಿದ್ದರು. ನ್ಯಾಯವಾದಿ ಚಂದ್ರಕಾಂತ್ ಆರ್ ಕಾಳಗಿ ಕಾರ್ಯಕ್ರಮ ನಿರೂಪಣೆ ಮಾಡಿದರು.