ಬಸವ ಜಯಂತಿ ನಿಮಿತ್ಯವಾಗಿ ಸಾಮೂಹಿಕ ಶಿವ ಪಂಚಾಕ್ಷರ ಮಹಾಮಂತ್ರ ಜಪ

ವಿಜಯಪುರ, ಮೇ.16-ಬಸನಗರದಲ್ಲಿ ಬಸವ ಜಯಂತಿ ನಿಮಿತ್ಯವಾಗಿ ಧರ್ಮದರ್ಶಿಗಳಾದ ಪೂಜ್ಯ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಸಾಮೂಹಿಕ ಶಿವ ಪಂಚಾಕ್ಷರ ಮಹಾಮಂತ್ರ ಜಪಯಜ್ಞ ನಡೆಯಿತು.
ವೇದಮೂರ್ತಿ ಶ್ರೀ ಬಸಯ್ಯ ಸ್ವಾಮಿಗಳಿಂದ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನಡೆಯಿತು. ಶ್ರೀ ಅನಿಲ ಶಿವಶರಣರ ಇವರಿಂದ ಹರನಾಮಾವಳಿ ಪಠಣೆಯಾಗಿ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಬಸಪ್ಪ ನಡುವಿನಮನಿ, ಗಿರಮಲ್ಲ ದೇವರ ಸುರೇಶ ನಿಂಬಾಳ, ಶರಣಬಸವ ಕುಮಟಗಿ ಮತ್ತಿತರರುಪಾಲ್ಗೊಂಡಿದ್ದರು.