ಬಸವ ಜಯಂತಿ: ನಾಳೆ ಪೂರ್ವಭಾವಿ ಸಭೆ

ಕಲಬುರಗಿ,ಮಾ 25: ಏಪ್ರಿಲ್ 23ರಂದು ಜಗಜ್ಯೋತಿ, ಭಕ್ತಿ ಭಂಡಾರಿ ಬಸವಣ್ಣನವರ 890ನೇ ಜಯಂತ್ಯುತ್ಸವ ಆಚರಣೆ ಹಿನ್ನೆಲೆಯಲ್ಲಿ ಸಲಹೆಗಳನ್ನು ಪಡೆಯಲು ಇದೇ ಮಾರ್ಚ್ 26ರಂದು ಸಂಜೆ 6ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ತಿಳಿಸಿದ್ದಾರೆ.ಸಮಾಜದ ಹಿರಿಯ ಮುಖಂಡರು, ಮಹಾಸಭಾದ ಎಲ್ಲಾ ಘಟಕದ ಪದಾಧಿಕಾರಿಗಳು, ಸಮಾಜ ಬಾಂಧವರು, ಬಸವಾಭಿಮಾನಿಗಳು, ಬಸವ ಪರ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ, ಅಮೂಲ್ಯವಾದ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ.