ಬಸವ ಜಯಂತಿ : ಜೋಡೆತ್ತುಗಳ ಭವ್ಯ ಮೆರವಣಿಗೆ

ಕಾಳಗಿ :ಎ.24: ಬಸವ ಜಯಂತೋತ್ಸವ ನಿಮಿತ್ಯವಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬಿದಿಗಳಲ್ಲಿ ಜೋಡಿ ಎತ್ತುಗಳ ಭವ್ಯ ಮೆರವಣಿಗೆ ಮಾಡಲಾಯಿತು.

 ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜ್ಯ ನೀಲಕಂಠ ಮರಿದೇವರು ನೇತೃತ್ವದಲ್ಲಿ ಗುರುಲಿಂಗಯ್ಯಸ್ವಾಮಿ ವ್ಮಠಪತ್ತಿ ವೈದಿಕತ್ವದಲ್ಲಿ ಜಗಧೀಶ ಮಾಲಿಪಾಟೀಲ ದಂಪತಿಗಳಿಂದ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಜರುಗಿತು. ನಂತರ ಬಸವೇಶ್ವರ ದೇವಸ್ಥಾನದಿಂದ ರಾಮನಗರ ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿಯೊಂದಿಗೆ ತೆರಳಿ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಾಯಂಕಾಲ ಸುಮಂಗಲೇಯರೆಲ್ಲರು ಸೇರಿ ಬಸವಣ್ಣನಿಗೆ ತೊಟ್ಟಿಲಲ್ಲಿ ಹಾಕಿ ಜೋಗುಳವನ್ನು ಹಾಡಿದರು. ತದನಂತರ ಬಸವೇಶ್ವರ ಭಾವಚಿತ್ರ ಹಾಗೂ ಜೊಡಿ ಎತ್ತುಗಳ ಮೆರವಣಿಗೆಗೆ ಡೊಣ್ಣೂರ ವೀರಭದ್ರಪ್ಪ ಅಜ್ಜನವರು ಚಾಲನೆ ನೀಡಿದರು. ಡೊಳ್ಳು, ಭಾಜ, ಭಜಂತ್ರಿಗಳೊಂದಿಗೆ ಪ್ರಾರಂಭವಾದ ಮೆರವಣಿಗೆಯು ಮುತ್ಯಾನಕಟ್ಟಿ, ಚಾಮುಂಡೇಶ್ವರ ದೇವಸ್ಥಾನ, ಪಲ್ಯಕಟ್ಟಿ, ಮುಖ್ಯಬಜಾರ ರಸ್ತೆ ಮಾರ್ಗವಾಗಿ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
 ವೀರಶೈವ ಸಮಾಜ ನಗರ ಘಟಕ ಅಧ್ಯಕ್ಷ ಜಗಧೀಶ ಮಾಲಿಪಾಟೀಲ, ಮುಖಂಡರಾದ ಸುಭಾಷ ರಾಠೋಡ, ತಿಪ್ಪಣಪ್ಪ ಕಮಕನೂರ, ರೇವಣಸಿದ್ಧಪ್ಪ ಮಾಸ್ಟರ್, ಮಲ್ಲಿಕಾರ್ಜುನ ಪಾಟೀಲ ಹುಳಗೇರಿ, ಶರಣಗೌಡ ಪೊಲೀಸ್ ಪಾಟೀಲ, ಶಿವಶರಣಪ್ಪ ಕಮಲಾಪೂರ, ರಾಮಶೆಟ್ಟಿ ಮಾಲಿಪಾಟೀಲ, ರಾಜೇಶ ಗುತ್ತೇದಾರ, ಪ್ರಶಾಂತ ಕದಮ, ರಾಘವೇಂದ್ರ ಗುತ್ತೇದಾರ, ವೇದಪ್ರಕಾಶ ಮೋಟಗಿ, ಸೂರ್ಯಕಾಂತ ಕಟ್ಟಿಮನಿ, ಶೇಖರ ಮಾನಶೆಟ್ಟಿ, ಕಾಳಶೆಟ್ಟಿ ಪಡಶೆಟ್ಟಿ, ಅಮೃತ ಪಾಟೀಲ, ಬಂಡಪ್ಪ ಬೊಮ್ಮಣ್ಣಿ, ಶರಣು ಮುಕರಂಬಿ, ನಾಗರಾಜ ಚಿಕ್ಕಮಠ, ಶಿವಕಿರಣ ಪ್ಯಾಟಿಮಠ, ರೇವಣಸಿದ್ಧ ಹರಕಂಚಿ, ಅಶೋಕ ಕುಡ್ಡಳ್ಳಿ, ರಾಜೇಂದ್ರಬಾಬು ಹಿರಾಪೂರ, ಕಾಳು ಮಾನಶೆಟ್ಟಿ, ವಿಶ್ವನಾಥ ಮಡಿವಾಳ, ಕಾಳಪ್ಪ ಖದ್ದರಗಿ ಸ್ಭೆರಿದಂತೆ ಇತರರು ಇದ್ದರು.