
ಕಲಬುರಗಿ :ಎ.23: 890 ನೇ ಬಸವೇಶ್ವರ ಜಯಂತಿ ಅಂಗವಾಗಿ ಬಸವ ಜಯಂತಿ ಉತ್ಸವ ಮಹಿಳಾ ಸಮಿತಿ ವತಿಯಿಂದ ನಗರದಲ್ಲಿ ಪ್ರಪ್ರಥಮ ಬಾರಿಗೆ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಯಿತು. ಬೈಕ್ ರ್ಯಾಲಿ ಚಾಲನೆಯನ್ನು ಶರಣಬಸವೇಶ್ವರ ಸಂಸ್ಥಾನದ ಕುಮಾರಿ ಶಿವಾನಿ ಎಸ್ ಅಪ್ಪ, ಭವಾನಿ ಎಸ್ ಅಪ್ಪ, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಕಾವೇರಿ ಮೋದಿ, ಸುಶೀಲಾ ಡಿ ವಿ ಪಾಟೀಲ್, ಬಸವ ಜಯಂತಿ ಉತ್ಸವ ಸಮಿತಿ ಮಹಿಳಾ ಅಧ್ಯಕ್ಷ ಡಾ.ನಾಗವೇಣಿ ಪಾಟೀಲ್ ರೇವೂರ್, ಉಪಾಧ್ಯಕ್ಷರಾದ ಚಂದನಾ ಹಾರಕೂಡೆ, ಸಂಗಿತಾ ಕೊರಳ್ಳಿ, ಪ್ರಧಾನ ಕಾರ್ಯದರ್ಶಿ ಮಾಲಾ ಕಣ್ಣಿ, ಕಾರ್ಯದರ್ಶಿ ಸಪ್ನಾ ಪಾಟೀಲ್ ರೆಡ್ಡಿ, ಲತಾ ಬಿಲಗುಂದಿ ಅವರು ಚಾಲನೆ ನೀಡಿಡದರು.
ಮಹಿಳೆಯರಿಗಾಗಿ ಬೈಕ್ ರ್ಯಾಲಿ ಎಮ್ ಎಸ್ ಕೆ ಮಿಲ್ ಗ್ರೌಂಡಿಂದ ಪಟೇಲ್ ವೃತ್ತ, ಮಿನಿ ವಿಧಾನ ಸೌಧ ಮಾರ್ಗವಾಗಿ ಜಗತ್ ವೃತ್ತದ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅನೇಕ ಕಾಲೇಜಿನ ವಿದ್ಯಾರ್ಥಿಗಳು ಮಹಿಳೆಯರು ಪಾಲ್ಗೊಂಡು. ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಜಗಜ್ಯೋತಿ ಬಸವೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಢದಿಂದ ಯಶಸ್ವಿಯಾಗಿ ಸಾಗಿ ಬಂತು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು, ಮಹಿಳಾ ಮಣಿಗಳು ಉಪಸ್ಥಿತರಿದ್ದರು.