ಕಲಬುರಗಿ:ಎ.24:ಬಸವ ಜಯಂತಿ ಉತ್ಸವ ಕಲಬುರಗಿ ,ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವರ ಸಹಯೋಗದಲ್ಲಿ ಶರಣ ಶ್ರೀ ಡಿ ವಿ ಪಾಟೀಲ್ ವೇದಿಕೆಯಲ್ಲಿ ವಿಶ್ವಗುರು ಬಸವಣ್ಣನವರ 890ನೇಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಚನ ಸಂಗೀತ ಕಾರ್ಯಕ್ರಮ ಬೆಳಿಗ್ಗೆ ಯಿಂದ ಸಂಜೆವರೆಗೆ ಕೇಳುಗರ ಮನ ಸೆಳೆಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ಅವರು ಬಸವನ ನೆನೆಯುವುದೇ ಭಕ್ತಿಯ ಪಥವು ಹಾಗೂ ಜಗವಸು ತ್ತಿರುವುದು ನಿನ್ನಯ ಮಾಯೆ,ಗುರುವೇ ಶಿವನು ಶಿವನೇ ಗುರುವು ವಚನಗಳನ್ನು ಹಾಡಿ ಜನರಿಂದ ಮೆಚ್ಚುಗೆ ಪಡೆದರು.ಇನ್ನೋರ್ವ ಹಿರಿಯ ಆಕಾಶವಾಣಿ ಕಲಾವಿದರಾದ ದತ್ತರಾಜ ಕಲಶೆಟ್ಟಿ ಬಂದರವಾಡ ಬಸವಣ್ಣನವರ ವಚನಗಳನ್ನು ಹಾಡಿ ಜನಮನ ಸೆಳೆದರು.ನಂತರ ಬಸಯ್ಯ ಗುತ್ತೇದಾರ್ ಕಸ್ತೂರಿ ಡಿ, ಘಟ್ಟಿಕಾರ್ ವಿಜಯಲಕ್ಷ್ಮಿ ಕೆಂಗನಾಳ, ನಾಗಲಿಂಗಯ್ಯ ಸ್ಥಾವರಮಠ,ಬಸವರಾಜ್ ಕಟ್ಟಿಮನಿ, ಸಿ ಎಸ್, ಮಾಲಿ ಪಾಟೀಲ್,ಹಾಗೂ ಸದ್ಗುರು ಕಲಾ ತಂಡದಿಂದ ಎಲ್ಲ ಶರಣರ ಗೀತೆಗಳನ್ನು ಹಾಡಿ ವೇದಿಕೆಗೆ ಕಳೆ ತಂದರು.ಕಾರ್ಯಕ್ರಮದಲ್ಲಿ ಸಮಾಜದ ಗಣ್ಯ ಮಾನ್ಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಚನ ಸಂಗೀತ ಕಾರ್ಯಕ್ರಮ ಆಲಿಸಿದರು.