ಬಸವ ಜಯಂತಿ ಆಚರಣೆ

ಬೀದರ್:ಎ.26: ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಸ್ವಧಾರ ಕೇಂದ್ರದಲ್ಲಿ ಮಹಾತ್ಮಾ ಬಸವಣ್ಣನವರ 890ನೇ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಳದ ಸಿಬ್ಬಂದಿಗಳಿಂದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸ್ಧಧಾರ ಕೇಂದ್ರದ ಫಲಾನುಭವಿ ಕು.ನಿಕಿತಾ ಅವರು ಮಾತನಾಡಿ, ವಿಶ್ವಗುರು ಬಸವಣ್ಣನವರು ವಿಶ್ವಕಂಡ 12ನೇಯ ಶತಮಾನದ ಮಹಾ ಕಾಯಕಯೋಗಿ ಹಾಗೂ ಸಮಾಜ ಸುಧಾರಕರೆಂದರು.
ಅದೇ ರೀತಿಯಾಗಿ ಅನುಭವ ಮಂಟಪವನ್ನು ಜಗತ್ತಿನ ಪ್ರಥಮ ಸಂಸತ್ತು ಎಂಬ ಪರಿಕಲ್ಪನೆ ನೀಡಿದವರು ಜಗಜ್ಯೋತಿ ಬಸವಣ್ಣನವರು ಎಂದು ನುಡಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮನೋಹರ ಬಿ. ಸಾಳುಂಕೆ ಅವರಿಂದ ನೆರವೇರಿತು. ವೇದಿಕೆ ಮೇಲೆ ಸ್ವಧಾರ, ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.