ಬಸವ ಜಯಂತಿ ಆಚರಣೆ

ಕಲಬುರಗಿ,ಮೇ.16-ಕಿಣ್ಣಿ ಸಡಕ, ಜ್ಞಾನ ಕಸ್ತೂರಿ ಶಿಕ್ಷಣ ಸಂಸ್ಥೆ ವತಿಯಿಂದ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಭಕ್ತ ಕುಂಬಾರ ಕುಟೀರದಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಖ್ಯಾತ ಶಿಲ್ಪ ಕಲಾವಿದ ಗೌರಿಶಂಕರ ಗೋಗಿ ಪೂಜೆ ಸಲ್ಲಿಸಿದರು. ಚಿತ್ರ ಕಲಾವಿದ ಸಿದ್ದು ಅಣದೂರ, ಎಸ್.ಎಂ.ಭಕ್ತ ಕುಂಬಾರ ಉಪನ್ಯಾಸಕ ಬಸವರಾಜ ಎಳವಂತಗಿ, ಅನಿಲಕುಮಾರ ಕುಂಬಾರ ಸಿದ್ದು ಸಾಹುಕಾರ ರೆಬಲ್ ಹಾಗೂ ಮನೊಹರ ಪಂಚಾಳ ರವರು ಉಪಸ್ಥಿತಿಯಲ್ಲಿ ಇದ್ದರು.