ಬೀದರ್: ಎ.24:ನಗರದ ಬೇಟಿ ಸರ್ಕಲ್ ಬಳಿ ಇರುವ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯಾಲಯದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಯಿತು.
ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆಯಾಗಿರುವ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕು.ಮಂಗಲಾ ಮರಕಲೆ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣನನವರು ಮೊಟ್ಟ ಮೊದಲ ಪಾರ್ಲಿಮೆಂಟ್ ಸ್ಥಾಪಿಸಿ ಮಹಿಳಾ ಸಮಾನತೆ ಸಾರಿದ ಜಗತ್ತಿನ ಮೊದಲ ದಾರ್ಶನಿಕರೆನಿಸಿರುವರು. ವರ್ಣರಹಿತ, ಜಾತಿ ರಹಿತ ಸಮಾಜ ನಿರ್ಮಿಸುವಲ್ಲಿ ಚೊಚ್ಚಲ ಆದ್ಯತೆ ನೀಡಿರುವ ಅವರು, ಇಂದು ದಲಿತರಿಗೆ ನ್ಯಾಯ ದೊರಕಲು ಬಸವಣ್ನನವರ ತತ್ವಗಳೇ ಮುಖ್ಯ ಕಾರಣವೆಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಭಾಗ್ಯಶ್ರೀ, ಆರೋಹಿನಿ, ಐಶ್ವರ್ಯ, ಇತರೆ ಪ್ರಮುಖರಾದ ನೀಲಕಂಠ, ಮಾಣಿಕಪ್ರಭು, ಪ್ರಮೋದ, ರೋಹಿತ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.