ಬಸವ ಜಯಂತಿ ಆಚರಣೆ ವಿಳಂಬ ಗ್ರಾಮಸ್ಥರ ಪ್ರತಿಭಟನೆ

ಭಾಲ್ಕಿ:ಮೇ.11:ತಾಲೂಕಿನ ತಳವಾಡ(ಕೆ) ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಮಯನುಸಾರ ಬಸವ ಜಯಂತಿ ಆಚರಣೆ ಮಾಡಿಲ್ಲವೆಂದು ಆರೋಪಿಸಿ ಗ್ರಾಪಂನ ಸದಸ್ಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮ ಪಂಚಾಯತಿ ಕಚೇರಿ ಎದುರು ಶುಕ್ರವಾರ ಗ್ರಾಪಂನ ಕೆಲ ಸದಸ್ಯರು, ಸಾರ್ವಜನಿಕರು ಜಮಾಯಿಸಿ ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕಿತ್ತು. ಆದರೆ ಬೆಳಿಗ್ಗೆ 10 ಗಂಟೆಯಾದರೂ ಪೂಜೆ ನೆರವೇರಲಿಲ್ಲ.
ಜತೆಗೆ ಬಸವ ಜಯಂತಿ ಆಚರಣೆ ಬಗ್ಗೆ ಸ್ಥಳೀಯ ಗ್ರಾಪಂ ಸದಸ್ಯರು ಸೇರಿ ಸಾರ್ವಜನಿಕರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಪಂಚಾಯತಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಮೇಲಧಿಕಾರಿಗಳು ಭೇಟಿ ನೀಡುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ದೌಡಾಯಿಸಿದ ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಣಮಂತರಾವ ಕೌಟಗೆ ಅವರಿಗೆ ಬಸವ ಜಯಂತಿ ಆಚರಣೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ಗ್ರಾಮದ ಪ್ರಮುಖರಾದ ಶರಣಪ್ಪ ರಾಜಾಪೂರೆ, ಶಿವಕುಮಾರ ಪಾಟೀಲ್, ರವಿ ಪಾಟೀಲ್, ಜಗನ್ನಾಥ ಪಾಟೀಲ್, ಅಂಬರೀಷ ಇನಾಮತೆ, ಮಹಾದೇವ ಧನ್ನೂರೆ, ಉಮಾಕಾಂತ ಕಮಲಾಪೂರೆ, ಸಿದ್ರಾಮ ರಾಜಾಪೂರೆ, ಕಾರ್ತಿಕ ಪಿರಶಟ್ಟೆ, ಓಂಕಾರ ಕನಶೆಟ್ಟೆ, ಸಿದ್ದು ಚಾವಳೆ, ಸೋಮನಾಥ ರಾಜಾಪೂರೆ, ನಂದು ಚಿಕಲಚಂದೆ, ಸೋಮನಾಥ ಚಿಕಲಚಂದೆ, ಶ್ರಾವಣ ಸೂರ್ಯವಂಶಿ, ನಾಗೇಶ ಗಜರೆ, ಜ್ಯೋತಿಬಾ ಭೋಸ್ಲೆ, ಸಿದ್ದು ಎರನಳ್ಳೆ, ಸಂಗಮೇಶ ಬಾಳೂರೆ, ಬಾಲಾಜಿ ರಾಜಾಪೂರೆ, ಸುನಿಲ ಕನಶೆಟ್ಟೆ ಸೇರಿದಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.