
ಮುನವಳ್ಳಿ,ಏ26: ಪಟ್ಟಣದ ಶ್ರೀ ಸೋಮಶೇಖರ ಮಠದ ಸಬಾ ಭವನದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀ ಮುರುಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ತೊಟ್ಟಿಲೋತ್ಸವ, ವಚನ ಕಂಠಪಾಠ, ಶರಣ ವೇಷ ಭೂಷಣ, ಸಂಗೀತ ಪಾಠಶಾಲೆ ಸ್ಪರ್ಧೆಗಳು, ಉಡಿ ತುಂಬುವ ಕಾರ್ಯಕ್ರಮ, ಪೂಜಾ ಕಾರ್ಯಕ್ರಮ ಜರುಗಿತು.
ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿ ಅನುಭವ ಮಂಟಪ ಪ್ರಾರಂಭಿಸಲು ಬಸವಣ್ಣನವರು ಒಂದು ಸಮಾಜಕ್ಕೆ ಸಿಮೀತರಾಗದೆ ಎಲ್ಲ ಸಮುದಾಯಗಳ ಜನರನ್ನು ಒಗ್ಗೂಡಿಸಿದರು ಎಲ್ಲ ಜನರಲ್ಲಿ ಕಾಯಕ ದಾಸೋಹ ಸಮಾನತೆಯನ್ನು ಸಾಕಾರಗೊಳಿಸಿದರು ಎಂದರು.
ಮಂಜುನಾಥ ಭಂಡಾರಿ, ಅಣ್ಣಪ್ಪಗೌಡ ಶಾನಭೋಗ, ಶಂಕರ ಗಯ್ಯಾಳಿ, ಬಾಳು ಹೊಸಮನಿ, ಅಶೋಕ ಸಂಕಣ್ಣವರ, ರುದ್ರಮ್ಮ ಶಿರಸಂಗಿ, ಅನ್ನಪೂರ್ಣ ಲಂಬೂನವರ, ಮುಕ್ತಾ ಪಶುಪತಿಮಠ, ರಾಧಾ ಕುಲಕರ್ಣಿ ಹಾಗೂ ಅನ್ನದಾನೇಶ್ವರ ಮಹಿಳಾ ಬಳಗ, ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಗಂಗಾಧರ ಗೊರಾಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.