ಬಸವ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ

ಕಲಬುರಗಿ,ಫೆ.25:ಜೇವರ್ಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದಿ.26 ರಂದು ರವಿವಾರ ಸಂಜೆ 6:00 ಗಂಟೆಗೆ ಶ್ರೀಷಣ್ಮುಖ ಶಿವಯೋಗಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಬಸವ ಚೇತನ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ಕಲ್ಲಾ ತಿಳಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ.ಅಜಯಸಿಂಗ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ ಅದ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಜಶೇಖರ ಸೀರಿ, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಪಿಎಸ್‍ಐ ಶಿವರಾಜ ಪಾಟೀಲ ಆಗಮಿಸುವರು.
ಇದೇ ವೇಳೆ ಸಾಹಿತಿ ಸದಾನಂದ ಪಾಟೀಲ, ಸಿಪಿಐ ರವಿ ನಾಯ್ಕೋಡಿ, ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರ, ಶಿವಪುತ್ರಪ್ಪ ಸಾಹು ಕೋರಿ, ಬಸವಕೇಂದ್ರದ ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ಸಿದ್ದು ಸಾಹು ಅಂಗಡಿ, ಡಾ.ಮಹ್ಮದ್ ಯಾಸೀನ್, ರಾಜು ಪವಾರ, ಪ್ರಾಚಾರ್ಯರಾದ ನವೀದ್ ಅಂಜುಂ ಸಲ್ಮಾ, ಮೋಹಿನುದ್ಧಿನ್ ಇನಾಂದಾರ, ಮಹಿಬೂಬ ಪಟೇಲ, ಶರಣು ಅವರಾದ, ಅರುಣರೆಡ್ಡಿ, ರವಿಚಂದ್ರ ಗುತ್ತೇದಾರ, ಮಹಾನಂದ ಹುಗ್ಗಿ, ರಾಣೋಜಿ ಸುಬೇದಾರ, ಶರಣು ಪಾಟೀಲ, ಸಂಗಣ್ಣ ಹೂಗಾರ, ಸಿದ್ದು ಅಂಕಸದೊಡ್ಡಿ, ಸಿದ್ದು ಮಾವನೂರ ಅವರಿಗೆ ಬಸವ ಚೇತನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಂತರ ಗಾಯಕರಾದ ಇದು ಬ್ಯಾರೆನೆ ಐತಿ ಖ್ಯಾತಿಯ ಸುರೇಶ ಇಂಚಗೇರಿ, ಭರತರಾಜ, ದೀಪಾ ಹಳಿಯಾಳ, ಕವಿತಾ ಚಲಗೇರಿ, ಕಲ್ಯಾಣಿ ಬೆಳಗಾವಿ, ಜೂ.ರವಿಚಂದ್ರ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.