ಬಸವ ಗುರುಕುಲ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

ಔರಾದ :ಆ.6: ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿಯವರ ಆಶ್ರಯದಲ್ಲಿ ನಡೆಯುತ್ತಿರುವ ಔರಾದ ಬಸವ ಗುರುಕುಲ ವಿದ್ಯಾರ್ಥಿಗಳಿಂದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಜರುಗಿತು.

ಸೈಕಲ್ ಜಾಥಾ ಬಸವ ಗುರುಕುಲದಿಂದ ಪ್ರಾರಂಭವಾಗಿ ಚನ್ನಬಸವ ಪಟ್ಟದೇವರ ವೃತ್ತ, ಕನ್ನಡಾಂಬೆ ವೃತ, ಬಸ್ ನಿಲ್ದಾಣ, ಬಸವೇಶ್ವರ ವೃತ, ಅಮರೇಶ್ವರ ದೇವಾಲಯ, ಸೇರಿದಂತೆ ನಗರದ ವಿವಿಧ ಬಡಾವಣೆಗಳ ಮೂಲಕ ಬಸವ ಗುರುಕುಲ ಶಾಲೆಯಲ್ಲಿ ಸಮಾರೋಪಗೊಂಡಿತು.

ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ಅವರು ಸೈಕಲ್ ಜಾಥಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಆಚರಿಸುತ್ತಿರುವ ಅಂಗವಾಗಿ, ಸೈಕಲ್ ಜಾಥಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಸವ ಗುರುಕುಲ ಸಮುಚ್ಚಯದ ಕಾರ್ಯದರ್ಶಿ ಮನ್ಮಥಪ್ಪ ಹುಗ್ಗೆ ಅವರು ಮಾತನಾಡಿ ಸೈಕಲ್ ತುಳಿಯುದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಬಲ್ಲರು,ಮಕ್ಕಳು ಸದೃಢವಾದಾಗ ಮಾತ್ರ ದೇಶ ಕಟ್ಟಲು ಸಾದ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರ ಡಿ.ಎಡ್ ಕಾಲೇಜು ಪ್ರಾಚಾರ್ಯ ಶರಣಪ್ಪ ನೌಬಾದೆ,ಡಾ.ಚನ್ನಬಸವ ಪಟ್ಟದೇವರು ಐಟಿಐ ಕಾಲೇಜು ಪ್ರಾಚಾರ್ಯ ಸತೀಶ ಗಂಧಿಗೂಡೆ, ಪ್ರೌಢ ಶಾಲಾ ಮು.ಗು.ನಿರ್ಮಲಾ ಸೇರಿ, ಪ್ರಾ.ಶಾಲೆ ಮು.ಗು. ಇಂದುಮತಿ ಎಡವೆ, ಆಂಗ್ಲ ಮಾಧ್ಯಮ ಶಾಲೆ ಮು.ಗು. ಸನ್ವಿರ್ ಸುಲ್ತಾನ, ಶಿಕ್ಷಕರಾದ ನಾಗನಾಥ ಶಂಕು, ಸಂಜೀವ ವಲಾಂಡೆ, ಸಂತೋಷ ಮಡಿವಾಳ, ಮಹೇಶ ಕುಲಕರ್ಣಿ, ರೇಖಾ ನೌಬಾದೆ, ಬಸವರಾಜ ತಳವಾರ, ವಾಮನರಾವ ಮಾನೆ,ನಾಗನಾಥ ಪಾಟೀಲ್, ಸುರೇಖಾ ದಯಾನಂದ, ಬಾಲಾಜಿ ನಿಟ್ಟೂರೆ, ಸುರೇಶ ಪುರವಂತ, ರೇಣುಕಾ ಗಂಗೂಜಿ, ಸಂಗೀತಾ ಪಾಟೀಲ, ಶ್ರೀದೇವಿ ಕುಲಕರ್ಣಿ, ಅಮರ ದ್ಯಾಡೆ,ಅಮರ ನಿಷ್ಪತ್ತೆ ಸೇರಿದಂತೆ ಶಾಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.