ಬಸವ ಕೇಂದ್ರ : ಶರಣ ಚಿಂತನ ಗೋಷ್ಠಿ

ರಾಯಚೂರು.ಆ.೦೧- ಬಸವ ಕೇಂದ್ರದಲ್ಲಿ ನಡೆದ ’ಶರಣ ಚಿಂತನ ಗೋಷ್ಠಿ’ಯ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಶ್ರೀ ಸಿದ್ರಾಮ ಶರಣರು, ಬೇಲ್ದಾಳ ಮಾತನಾಡಿ ಕನ್ನಡ ನಾಡಿನ ಪ್ರಥಮ ಪ್ರಜಾಸಾಹಿತ್ಯದ ವಚನಗಳು ನಮ್ಮ ಪರಂಪರೆಯ ಅಪೂರ್ವ ಸಂಸ್ಕೃತಿಯಾಗಿವೆ .
ಜೊತೆಗೆ ಶರಣರು ಕಾಯಕ ತತ್ವ, ವೈಚಾರಿಕತೆಯೊಂದಿಗೆ ಅಧ್ಯತ್ಮಿಕ, ರಾಜಕೀಯ, ಆರ್ಥಿಕ, ಸಮಾನತೆಯನ್ನು ನೀಡಿ, ಮಾನವೀಯತೆ ಎತ್ತಿ ಹಿಡಿದ ಧೀಮಂತರೆಂದರು. ಪೂಜ್ಯ ಶರಣೆ ಅಕ್ಕಮಹಾದೇವಿ, ಬಸವ ಯೋಗಾಶ್ರಮ, ಹೊಸದುರ್ಗ ಮಾತನಾಡಿ ಸ್ತ್ರೀ ಸಮಾನತೆ ನೀಡಿದ ಶ್ರೇಯಸ್ಸು ಬಸವಾದಿ ಶರಣಿರಿಗೆ ಸಲ್ಲುತ್ತದೆ. ಶರಣರು ನಮಗಾಗಿ ವಚನಗಳನ್ನು ನಿತ್ಯ ಅಧ್ಯಯನ ಮಾಡಿ, ಜೀವನದಲ್ಲಿ ಅಳಡಿಸಿಕೊಂಡು, ಆ ಮಾರ್ಗದಲ್ಲಿ ನಡೆದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಜೆ. ಬಸವರಾಜ, ವಕೀಲರು, ಸಿ. ಬಿ. ಪಾಟೀಲ, ವಕೀಲರು, ದೇವಣ್ಣ ನಾಯಕ, ವಕೀಲರು, ರಾಮಸ್ವಾಮಿ ನುಲಿ, ಶರಣೆ ಲಕ್ಷ್ಮಿ ಪಟ್ಟಣಶೆಟ್ಟಿ, ವಿಜಯಕುಮಾರ ಸಜ್ಜನ, ಮಹದೇವಪ್ಪ ಏಗನೂರ್, ಮುಂತಾದವರು ಮಾತನಾಡಿದರು.ಗಣಜಲಿ ಗ್ರಾಮ ಬಸವ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮೇಘರಾಜ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪೂಜ್ಯಶ್ರೀ ಸಿದ್ರಾಮ ಬೇಲ್ದಾಳ ಶರಣರನ್ನು, ಪೂಜ್ಯ ಶರಣೆ ಅಕ್ಕಮಹಾದೇವಿಯವರನ್ನು, ಇಂದೇ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಶ್ರೀ ಕಮಲಾಕರ ಸರ್ ವರನ್ನು ಗೌರವ ಸನ್ಮಾನ ಮಾಡಲಾಯಿತು. ಶರಣೆ ಪಾರ್ವತಿ ಪಾಟೀಲ, ಅಶ್ವಿನಿ ಮಾಟೂರ್, ಶರಣೆ ಜಗದೇವಿ ಮಂದಕಲ್ ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರೇಶ್ ಕಳ್ಳೊಳ್ಳಿ ಸ್ವಾಗತಿದ್ದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಚನ್ನಬಸವಣ್ಣ, ಇಂಜಿನಿಯರ್ ವಂದಿಸಿದರು.