ಬಸವ ಕಲ್ಯಾಣ ಮಠಕ್ಕೆ ಉತ್ತರಾಧಿಕಾರಿ ನೇಮಕ

ವಿಜಯಪುರ, ಏ.೨೩- ಭಾನುವಾರ ಅಕ್ಷಯ ತೃತೀಯ ಹಾಗೂ ಕ್ರಾಂತಿ ಯೋಗಿ ಬಸವೇಶ್ವರರ ಜಯಂತಿಯಂದು ಸಿದ್ದಗಂಗಾ ಮಠದಲ್ಲಿ ವಿಜಯಪುರದ ಬಸವ ಕಲ್ಯಾಣ ಮಠದ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ನಡೆಯಲಿದ್ದು, ಗೌರೀಶ್ ಕುಮಾರ್‌ರವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ ಎಂದು ಬಸವ ಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವಸ್ವಾಮೀಜಿರವರು ತಿಳಿಸಿರುವರು.
ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಬಿಳುಗುಲಿ ಗ್ರಾಮದ ಮಹದೇವಸ್ವಾಮೀಜಿರವರ ಸಹೋದರ ಎಂ.ವಿ.ಗಣೇಶ್ ಹಾಗೂ ಅಂಬಿಕಾ ದಂಪತಿಗಳ ೨೭ ವರ್ಷದ ಪುತ್ರ ಗೌರೀಶ್ ಕುಮಾರ್‌ರವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ.
ಗೌರೀಶ್ ಕುಮಾರ್‌ರವರು ಸಿದ್ದಗಂಗೆ ಶಾಲೆಗಳಲ್ಲಿಯೇ ವೇದಾಧ್ಯಯನ ನಡೆಸಿದ್ದು, ವಿದ್ವತ್ ಪ್ರಥಮ ವರ್ಷ ಓದುತ್ತಿರುವರು. ಭಕ್ತಾಧಿಗಳು ಮಠದ ಹಿತೈಷಿಗಳು ಉತ್ತರಾಧಿಕಾರ ಸಮಾರಂಭದಲ್ಲಿ ಭಾಗವಹಿಸಬೇಕೆಂದು ತಿಳಿಸಿರುವರು.