ಬಸವ ಉತ್ಸವದಲ್ಲಿ ಸಂಗೀತ ರಸದೌತಣ ಉಣಬಡಿಸಿದ ಕಲಾವಿದರು

ಬೀದರ,ಮಾ.12: ಬಸವ ಉತ್ಸವ-2023ರ ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದ ಮುಖ್ಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳಾದ ವಚನ ಗಾಯನ, ಬಸವಣ್ಣನವರ ವಚನ ನೃತ್ಯ, ಹಾರ್ಮೋನಿಯಂ ಸೋಲೋ, ಬಸವಣ್ಣನವರ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳಿAದ ಆಕರ್ಷಕವಾಗಿ ಪ್ರದರ್ಶನ ನೀಡಿದವು.
ಶಿವಾನಂದ ಮಂದೇವಾಲ ಅವರು ವಚನ ಗಾಯನ ನೀಡಿದರು. ನಾಗಭೂಷಣ ಮತ್ತು ತಂಡ ಬೆಂಳೂರು ಇವರ ವೇದಪ್ರೀಯ ಶಿವನಲ್ಲ ನಾದಪ್ರೀಯ ಶಿವನಲ್ಲ, ಭಕ್ತಿಪ್ರೀಯ ನಮ್ಮ ಕೂಡಲ ಸಂಗಮ ದೇವ ಎಂಬ ಗೀತ ಗಾಯನ ಆಕರ್ಷಕವಾಗಿತ್ತು. ರಾಜೇಂದ್ರಸಿAಗ ಪವಾರ ಮತ್ತು ತಂಡದಿAದ ಹಾರ್ಮೋನಿಯಮ್ ಸೋಲೋ ನಡೆಸಿಕೊಟ್ಟರು. ರಾಮಲು ಗಾದಗಿ ತಂಡದಿAದ ಬಸವಣ್ಣನವರು ಕುರಿತು ವಚನ ಗಾಯನ ನೀಡಿದರು. ರೇಖಾ ಅಪ್ಪಾರಾವ ಸೌದಿ ಮತ್ತು ಸಂಗಡಿಗರಿAದ ಕೂಡಲ ಸಂಗಮ ದೇವ, ಈ ಕನ್ನಡ ಹೆಣ್ಣನ್ನು ಮರಿಬೇಡ, ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ, ಕರುನಾಡ ತಾಯಿ ಸದಾ ಚಿನ್ಮಯಿ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಸುಮಧುರವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಗಾಯಕರಾದ ರಘು ದೀಕ್ಷಿತ ಅವರ ಸೋರುತಿಹದು ಮನೆಯ ಮಾಳಿಗೆ, ಕೊಡಗನ ಕೋಳಿ ನುಂಗಿತ್ತಾ ಸೇರಿದಂತೆ ಇತರೆ ಹಾಡುಗಳಿಗೆ ಬಸವಕಲ್ಯಾಣ ಜನತೆ ತಲೆದೂಗುವಂತೆ ಮಾಡಿದರು. ಹೀಗೆ ಹಲವಾರು ಕಲಾವಿದರು ಸಂಸ್ಕೃತಿಕ ರಸದೌತಣವನ್ನು ಬಸವಕಲ್ಯಾಣದ ಜನತೆಗೆ ಉಣಬಡಿಸಿದರು.