ಬಸವ ಉತ್ಸವದಲ್ಲಿ ಜರುಗಿದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು

ಬೀದರ,ಮಾ.13: ಬಸವ ಉತ್ಸವ-2023ರ ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದ ಮುಖ್ಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಾದ ವಚನ ಗಾಯನ, ಬಸವಣ್ಣನವರ ವಚನ ನೃತ್ಯ, ಶಾಸ್ತ್ರೀಯ ಸಂಗೀತ, ಬಸವಣ್ಣನವರ ವಚನ, ಜಾನಪದ ಗೀತೆ, ವಚನ ಗಾಯನ ಕಾರ್ಯಕ್ರಮಗಳು ಜರುಗಿದರು.

ಮಹಾಲಕ್ಷ್ಮೀ ಮತ್ತು ತಂಡ ರಾಯಚೂರು ಇವರಿಂದ ವಚನ ಗಾಯನವು ಸುಮಧುರವಾಗಿ ಮೂಡಿಬಂದಿತು. ನಿವೃತ್ತ ವಾರ್ತಾಧಿಕಾರಿ ಚಂದ್ರಕಾಂತ ಅವರು ಬಸವಣ್ಣನವರ ವಚನಗಳ ಕುರಿತು ತ್ರಿಭಾಷಾ ಗಾಯನ ನಡೆಸಿಕೊಟ್ಟರು. ಗುರುಶಾಂತಯ್ಯ ಸ್ಥಾವರಮಠ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು. ಬಸವರಾಜ ಬಂಟನೂರ ಯಾದಗಿರಿ ಮತ್ತು ತಂಡದವರಿಂದ ವಚನ ಗಾಯನ ಹಾಗೂ ಶಿವಕುಮಾರ ಪಾಂಚಾಳ ಬೀದರ ಇವರ ವಚನ ಗಾಯನವು ಸುಮಧುರವಾಗಿ ನಡೆಯಿತು.

ಅನನ್ಯ ಭಟ್ಟ ಮತ್ತು ಚೇತನ ನಾಯರ ಸಂಗೀತ ಜೋಡಿ ಬಸವಕಲ್ಯಾಣದ ಜನತೆಗೆ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಸಂಗೀತದ ಮೋಡಿ ಮಾಡಿದರು. ಅನನ್ಯ ಭಟ್ಟ ಅವರು ಹಾಡಿದ ಧೀರಾದಿ ಧೀರ ಧೀರ, ಶಿವ ಶಿವ ಹರ ಹರನು, ತಂದಾನೋ ತಾನಿ ತಂದಾನೋ, ಸಿದ್ದಯ್ಯ ಸ್ವಾಮಿ ಮತ್ತು ಚೇತನ ನಾಯರ ಅವರು ಹಾಡಿದ ಟಗರು ಬಂತು ಟಗರು, ಸಿಂಗಾರ ಸಿರಿಯೇ, ಮಹಾದೇವ ಈ ಹಾಡುಗಳ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸಿದರು.

ಹಿಂದಿ ಸಂಗೀತ ಹಾಡುಗಾರರಾದ ಷಣ್ಮೂಖ ಪ್ರೀಯಾ ಮತ್ತು ನಿಹಾಲ್ ತೌರ್ ಅವರಿಂದ ವಿವಿಧ ಹಿಂದಿ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹೀಗೆ ಹಲವಾರು ಕಲಾವಿದರು ಬಸವಕಲ್ಯಾಣದ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸಿದರು.