ಬಸವೇಶ್ವರ ಸ್ವಾಮಿಯ ಅಗ್ನಿಕುಂಡೋತ್ಸವ

ಕನಕಪುರ, ಏ.೨೯ ಕಸಬಾ ಹೋಬಳಿಗೆ ಸೇರಿದ ಚಿಕ್ಕಮುದುವಾಡಿ ಗ್ರಾಮದ ಶ್ರೀ ಲಕ್ಷಿ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ಅಗ್ನಿಕೊಂಡೊತ್ಸವ ಹಾಗೂ ಜಾತ್ರಾ ಮಹೋತ್ಸವ ಬಹಳ ಸಡಗರ ಸಂಭ್ರಮದಿಂದ ನೆರವೇರಿತು.
ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವದಅಂಗವಾಗಿ ಎರಡೂ ದಿನಗಳ ಕಾಲ ಪೂಜಾ ಕಾರ್‍ಯಕ್ರಮಗಳು ದೇವಾಲಯದ ಪ್ರಧಾನಅರ್ಚಕರ ನೇತೃತ್ವದಲ್ಲಿ ನೆರವೇರಿದವು.
ಗ್ರಾಮದದೇವತೆಯಾದ ಶ್ರೀ ಬಸವೇಶ್ವರ ಸ್ವಾಮಿಯಅಗ್ನಿಕೊಂಡೋತ್ಸವದಅಂಗವಾಗಿ ಗ್ರಾಮದಲ್ಲಿ ಯಳವಾರ ಪೂಜೆ ಪೂಜೆ ನಡೆಯಿತು. ಗ್ರಾಮದ ಪ್ರತಿ ಮನೆಗಳಿಂದ ಯಳವಾರಕ್ಕೆ ಪೂಜೆ ಸಲ್ಲಿಸಲಾಯಿತು. ಬಸವೇಶ್ವರ ಸ್ವಾಮಿಯಅರ್ಚಕರಾದ ಪದ್ಮನಾಭರವರುಅಗ್ನಿಕೊಂಡವನ್ನುಆಯ್ದರು.
ಹಾಗೆಯೇ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವುಕಟಕ ಲಗ್ನದಲ್ಲಿಅದ್ದೂರಿಯಾಗಿ ಸಾವಿರಾರುಜನರ ಸಮ್ಮುಖದಲ್ಲಿ ನೆರವೇರಿತು.
ಈಸಂದರ್ಭದಲ್ಲಿ ಭಕ್ತಾದಿಗಳು ಹಣ್ಣುದವನವನ್ನುರಥದಲ್ಲಿ ಸಂಪನ್ನಗೊಂಡಿದ್ದ ಲಕ್ಷ್ಮಿನರಸಿಂಹಸ್ವಾಮಿಗೆ ಎಸೆದುತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥೋತ್ಸವದ ವೇಳೆ ವಿವಿಧಜಾನಪದ ಕಲಾ ಪ್ರಕಾರಗಳು ತಮ್ಮಕಲೆಯನ್ನು ಪ್ರದರ್ಶಿಸಿ ಭಕ್ತರ ಮೆಚ್ಚುಗೆಯನ್ನು ಪಡೆದವು. ಭಾನುವಾರ ಸಂಜೆಗ್ರಾಮದಲ್ಲಿ ಮುತ್ತಿನ ಪಲ್ಲಕ್ಕಿಉತ್ಸವವನ್ನುಕೂಡ ಮಾಡಲಾಯಿತು. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಅರ್ಚಕರಾದಕೃಷ್ಣಯ್ಯ್ನವರುಎಲ್ಲಾಧಾರ್ಮಿಕ ವಿಧಿ ವಿಧಾನಗಳ ನೇತೃತ್ವವನ್ನು ವಹಿಸಿದ್ದರು.