ಬಸವೇಶ್ವರ ಸಹಕಾರ ಬ್ಯಾಂಕನಲ್ಲಿ ಇ ಮುದ್ರಾಂಕ ಯಂತ್ರ ಉದ್ಘಾಟನೆ

ಕಲಬುರಗಿ.ನ.7: ಬಸವೇಶ್ವರ ಸಹಕಾರ ಬ್ಯಾಂಕನಲ್ಲಿ ಇ ಮುದ್ರಾಂಕ ಯಂತ್ರವನ್ನು ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸಿ ಮಾತನಾಡುತ್ತಾ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನ ಸೇವೆ ಬಗ್ಗೆ ಕೊಂದಾಡಿದರು.
ಕಲ್ಯಾಣ ಕರ್ನಾಟಕ ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಬ್ಯಾಂಕಿನ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಬ್ಯಾಂಕಿನ ಅಧ್ಯಕ್ಷ ಚಂದ್ರಶೇಕರ ತಳ್ಳಳಿ, ಉಪಾಧ್ಯಕ್ಷ ಎಂ.ಡಿ.ಪಾಟೀಲ್, ನಿರ್ದೇಕರಾದ ಆರ್.ಜಿ.ಶೆಟಗಾರ, ಸಿದ್ದಪ್ಪಾ ದೇವರಮನಿ, ಧರ್ಮಪ್ರಕಾಶ ಪಾಟೀಲ್, ಸಿದ್ರಾಮಪ್ಪ ಪಾಟೀಲ್, ಸುಭಾಷ ಕಿರಾಣಿ, ಆರ್.ಎಸ್.ಬಿರಾದರ, ಸಾವಿತ್ರಿ ಕುಳಗೇರಿ, ಶುಶಿಲಾಬಾಯಿ ಡಿ ಪಾಟೀಲ್, ಶಿವಲಿಂಗಪ್ಪ ಬಂಡಕ, ಗುಂಡೇರಾವ ಪದ್ಮಾಜಿ, ಮಾಜಿ ಅಧ್ಯಕ್ಷ ಕುಂಪೇಂದ್ರ ಪಾಟೀಲ್, ಮಾಜಿ ನಿರ್ದೇಕಿ ಮಹಾದೇವಿ ಕೆಸರಟಗಿ, ಬ್ಯಾಂಕಿನ ಸದಸ್ಯರಾದ ಬಸವರಾಜ, ಹಣಮಂತರಾವ ಪಾಟೀಲ್, ಮತ್ತು ಬ್ಯಾಂಕಿನ ವ್ಯವಸ್ಥಾಪಕರಾದ ಬಸವರಾಜ ಮೇತ್ರೆ, ಶರಣಕುಮಾರ ಹೀರಾಪುರ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು