ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

ಸಂಜೆವಾಣಿ ವಾರ್ತೆ

ದಾವಣಗೆರೆ. ಏ.೮; ನಗರದ ಎಸ್.ಜೆ.ಎಂ.ಕ್ಯಾಂಪಸ್‌ನ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿನ 16ನೇಯ ಪದವಿ ಪ್ರದಾನ ಸಮಾರಂಭ ನಡೆಯಿತು. ಒಟ್ಟು 100 ಸ್ನಾತಕ ಮತ್ತು 28 ಸ್ನಾತಕೋತ್ತರ ಪದವಿದರರು ಡಾಕ್ಟರೇಟ್ ಪದವಿ ಸ್ವೀಕರಿಸಿದರು. ಡಾ.ಸೀಮಾ ಮೇರಿಯಂ ಅವರು ಸ್ನಾತಕೋತ್ತÀರ ನೇತ್ರ ವಿಜ್ಞಾನ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ‍್ಯಾಂಕಿನೊAದಿಗೆ ಬಂಗಾರದ ಪದಕ ಪಡೆದಿದ್ದಾರೆ. ಡಾ.ನಾಗಶ್ರೀರವರು ನೇತ್ರ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇಯ ರ‍್ಯಾಂಕ್ ಪಡೆದಿದ್ದಾರೆ.ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮಿಗಳು, ಡಾ.ಬಸವಕುಮಾರಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯರಾದ ಎಸ್.ಜೆ.ಎಂ.ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ.ಸಿ.ಕಳಸದ, ಸದಸ್ಯರಾದ ಚಂದ್ರಶೇಖರ,ಜೆ.ಎಸ್.ಎಸ್.ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸುರೀಂದರ್ ಸಿಂಗ್, ರಾಜೀವ್ ಗಾಂಧೀ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ರಿಯಾಜ್ ಬಾಷ, ವೈದ್ಯಕೀಯ ಶಿಕ್ಷಣದ ನಿರ್ದೇಶಕರಾದ ಡಾ.ಸುಜಾತ ರಾಥೋಡ್. ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿ.ಪ್ರಶಾಂತ್, ಅಧೀಕ್ಷಕರಾದ ಡಾ.ಪಾಲಾಕ್ಷಯ್ಯ, ಡಾ.ರಾಜೇಶ್.ಎಂ.ಎಸ್, ಡಾ. ನಾರಾಯಣಮೂರ್ತಿ, ಡಾ. ಲಾವಣ್ಯ, ಡಾ.ಧರ್ಮರಾಜ್, ಡಾ.ಸುಮಂತ್. ಡಾ.ಕೊಟ್ರೇಶ್, ಡಾ.ಗೌಸ್ ಪಾಷ, ಡಾ.ಬಸವರಾಜ ಸವದಿ, ಡಾ. ರಾಮು, ಡಾ.ಸತೀಶ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಪ್ರಶಾಂತ್ ಸ್ವಾಗತಿಸಿ, ಡಾ.ಅಶ್ವಿನಿ, ಡಾ.ಅಮೃತ ನಿರೂಪಿಸಿ ವಂದಿಸಿದರು